ಸತ್ಯ ಘಟನೆಯನ್ನು ತೆರೆ ಮೇಲೆ ತೋರಿಸೋಕೆ ರೆಡಿಯಾಗ್ತಿದೆ “ನೋಡಿದ್ದು ಸುಳ್ಳಾಗಬಹುದು”

Date:

  • ಸತ್ಯ ಘಟನೆಯನ್ನು ತೆರೆ ಮೇಲೆ ತೋರಿಸೋಕೆ ರೆಡಿಯಾಗ್ತಿದೆ “ನೋಡಿದ್ದು ಸುಳ್ಳಾಗಬಹುದು”
  • ವಿಜಯ್ ಚಲಪತಿ ಆ್ಯಕ್ಷನ್ ಕಟ್ ಹೇಳಿರುವ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ ಅನಿಲ್ ಕುಮಾರ್ ಕೆಆರ್
  • ಚಿತ್ರದ ಹಾಡು “ಕನಸುಗಳ ಮೆರವಣಿಗೆ” ಇತ್ತೀಚೆಗಷ್ಟೇ ಬಿಡುಗಡೆಗೊಂಡು ಟ್ರೆಂಡಿಂಗ್ ನಲ್ಲಿದೆ

2018 ರಲ್ಲಿ ನಡೆದ ನೈಜ ಘಟನೆಯ ಆಧಾರಿತ ಕತೆ ಹೊಂದಿರುವ ಹೊಸ ಚಿತ್ರವೊಂದು ಶೀಘ್ರದಲ್ಲಿಯೇ ತೆರೆಗೆ ಬರಲಿದೆ. ಚಿತ್ರದ ಹೆಸರು “ನೋಡಿದ್ದು ಸುಳ್ಳಾಗಬಹುದು” Nodiddu Sullagabahudu ವಿಜಯ್ ಚಲಪತಿ Vijay Chalapathi ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಕೆ ಆರ್ Anil Kumar K R ಬಂಡವಾಳ ಹೂಡಿ ನಾಯಕ ನಟನಾಗಿಯೂ ಬಣ್ಣ ಹಚ್ಚಿರುವುದು ವಿಶೇಷ. ಚಿತ್ರದಲ್ಲಿ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರವಾಗಿದ್ದು ಶಕ್ತಿಯುತ ಮತ್ತು ಅರ್ಥಪೂರ್ಣ ಪಾತ್ರ ಇದಾಗಿದೆ.

ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ

ಈ ಚಿತ್ರದಲ್ಲಿ ಆಳವಾದ ಭಾವನಾತ್ಮಕ ಮೌಲ್ಯ ಇದೆ . ಕ್ಲೈಮ್ಯಾಕ್ಸ್ ಒಂದು ಪ್ರಮುಖ ಹೈಲೈಟ್ ಆಗಿರುತ್ತದೆ. ಚಿತ್ರವು ತನ್ನದೇ ಆದ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ. ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯದ ಮೇಲೆ ಕೇಂದ್ರೀಕರಿಸುತ್ತದೆ ಎನ್ನುತ್ತೆ ಚಿತ್ರತಂಡ. ಚಿತ್ರದ ಮೊದಲ ಹಾಡು “ಕನಸುಗಳ ಮೆರವಣಿಗೆ” Kanasugala Meravanige ಇತ್ತೀಚೆಗಷ್ಟೇ ಬಿಡುಗಡೆಗೊಂಡು ಟ್ರೆಂಡಿಂಗ್ ನಲ್ಲಿದೆ. ಅನಿರುದ್ಧ್ ಶಾಸ್ತ್ರಿ ಅವರು ಬರೆದಿರುವ ಈ ಹಾಡಿಗೆ ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ್ ಶಾಸ್ತ್ರಿ ಮತ್ತು ಪೃಥ್ವಿ ಭಟ್ ಧ್ವನಿ ನೀಡಿದ್ದಾರೆ. ಕನ್ನಡ ಮತ್ತು ತೆಲುಗು ಎರಡರಲ್ಲೂ ನಿರ್ಮಿಸಲಾಗಿದೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಗುಮ್ಮಿನೆನಿ ವಿಜಯ್ ಎರಡು ಹಾಡುಗಳಿಗೆ ಮತ್ತು ಮಿಹಿರಾಮ್ಸ್ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕೆವಿ ಕಿರಣ್ ಅವರ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಅವರ ಸಂಕಲನ, ಪ್ರಭು ಅವರ ನೃತ್ಯ ಸಂಯೋಜನೆ ಮತ್ತು ಸಾಹಸ ನಿರ್ದೇಶಕರಾಗಿ ನರಸಿಂಹ ಮಾಗಡಿ ಸಾಥ್ ನೀಡಿದ್ದಾರೆ. ಚಿತ್ರದ ಒಂದಷ್ಟು ಕೆಲಸಗಳು ಬಾಕಿಯಿದ್ದು ಶೀಘ್ರದಲ್ಲಿಯೇ ತೆರೆ ಕಾಣುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು “ನಾನು ಮತ್ತು ಗುಂಡ 2”...