- ಸ್ನೇಹ, ಪ್ರೀತಿ, ಪ್ರಣಯಗಳ ಸಮಾಗಮ “ಒಲವಿನ ಪಯಣ”
- ಫೆ. 21 ರಂದು ರಾಜ್ಯಾದ್ಯಂತ ತೆರೆಗೆ ಬಂದಿದೆ “ಒಲವಿನ ಪಯಣ”
- ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಕಿಶನ್ ಬಲ್ನಾಡ್ ನಿರ್ದೇಶನದ ಚಿತ್ರ
ಹಳ್ಳಿಯ ಮಧ್ಯಮವರ್ಗದ ಕುಟುಂಬದ ಯುವಕನ ಕಥೆಯನ್ನು ಹೊತ್ತ ಸಿನಿಮಾ “ಒಲವಿನ ಪಯಣ” Olavina Payana ಫೆ. 21 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಮುಳಗುಂದ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಎಸ್. ಮುಳಗುಂದ್ ನಿರ್ಮಾಣ ಮಾಡಿರುವ, ಈ ಚಿತ್ರವನ್ನು ಕಿರುತೆರೆಯ ಹಲವು ವರ್ಷಗಳ ಅನುಭವವನ್ನು ಬೆಳ್ಳಿತೆರೆಯಲ್ಲಿ ಓರೆಗೆ ಹಚ್ಚಿದ್ದಾರೆ ನಿರ್ದೇಶಕ ದಕ್ಷಿಣ ಕನ್ನಡ, ಪುತ್ತೂರು ಮೂಲದವರಾದ ಕಿಶನ್ ಬಲ್ನಾಡ್.

ಹಳ್ಳಿ ಯುವಕನ ಒಲವಿನ ಪಯಣ
ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗು ಬೆಂಗಳೂರಿನಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರ ಹಳ್ಳಿಯ ಮಧ್ಯಮ ವರ್ಗದ ಯುವಕನೊಬ್ಬ ತಾನು ಪ್ರೀತಿಸಿದ ಶ್ರೀಮಂತ ಹುಡುಗಿಯೊಬ್ಬಳನ್ನು ಮದುವೆಯಾಗುವ ಇಚ್ಛೆಯಿಂದ ಅವಳ ತಂದೆಗೆ ಹಾಕಿದ ಸವಾಲನ್ನು ಗೆದ್ದು, ಅವಳನ್ನು ಮದುವೆಯಾಗಿ ಜೀವನ ಸಾಗಿಸುವ ಕನಸನ್ನು ಹೊತ್ತುಕೊಂಡಿದ್ದಾಗ ವಿಧಿ ಅವನ ಜೀವನದ ದಿಕ್ಕನ್ನೇ ಬದಲಿಸಿಬಿಡುವ ಕತೆಯೇ ಈ ಚಿತ್ರದ ಜೀವಾಳ. ಬದುಕು ನಾವಂದುಕೊಂಡಷ್ಟು ಸುಲಭವಿಲ್ಲ, ಹಲವಾರು ತಿರುವುಗಳು ಸವಾಲುಗಳೇ ಜೀವನ ಎಂಬದನ್ನು ಈ ಚಿತ್ರ ತಿಳಿಸುತ್ತದೆ.
ಸುನಿಲ್, ಕುಶಿ ಪ್ರಿಯಾ ಹೆಗ್ಡೆ, ಬಲ ರಾಜವಾಡಿ, ಪದ್ಮರಾಜ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.