- ಪೋಸ್ಟರ್ ಮೂಲಕ ಕುತೂಹಲ ಕೆರಳಿಸ್ತಿದೆ “ಒಂದು ಅಂಕದ ಪ್ರಶ್ನೆ”
- ಅರ್ಜುನ್ ಲೂಯಿಸ್ ನಿರ್ದೇಶನ ಈ ಚಿತ್ರಕ್ಕಿದೆ.
- ಗಿರೀಶ್ ಹೆಗ್ಡೆ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ
ನಮಸ್ತೆ ಎಂಟರ್ ಟೈನರ್ಸ್ Namaste Entertiners ಲಾಂಛನದಲ್ಲಿ ಕಾರ್ಲಿಸ್ ಡಿಕುನ್ಹಾ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರು ಚಿತ್ರ “ಒಂದು ಅಂಕದ ಪ್ರಶ್ನೆ” ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಿಸಿ ಅನುಭವ ಹೊಂದಿರುವ ಅರ್ಜುನ್ ಲೂವಿಸ್ Arjun Louis. ಚೊಚ್ಚಲ ಬಾರಿಗೆ ನಾಯಕನಾಗಿ ಮಿಂಚಲಿರುವ ಗಿರೀಶ್ ಹೆಗ್ಡೆ Girish Hegde ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಆ ಮೂಲಕ ನಾಯಕನಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಕನ್ನಡದಲ್ಲಿ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ಬರುತ್ತಿದ್ದು, ಆ ಸಾಲಿಗೆ ಸೇರಲಿದೆ ಈ ಸಿನಿಮಾ.
ಕಾಮಿಡಿ, ಲವ್, ಸೆಂಟಿಮೆಂಟ್ ಕಾಲ್ಪನಿಕ ಕಥೆ
ಕೋಳಿ ಅಂಕದ ಚಟಕ್ಕೆ ಬಿದ್ದ ಯುವಕನ ಕಥೆಯನ್ನು ಕಾಮಿಡಿ, ಲವ್ ಮತ್ತು ಮದರ್ ಸೆಂಟಿಮೆಂಟ್ ಅಂಶಗಳೊಂದಿಗೆ ಹೊಸ ರೀತಿಯ ಕಮರ್ಷಿಯಲ್ ಫಾರ್ಮುಲದೊಂದಿಗೆ ಹೇಳಲಿದೆಯಂತೆ ಚಿತ್ರತಂಡ. ಮಂಗಳೂರು ಸುತ್ತಮುತ್ತಲಿನಲ್ಲಿ ನಡೆಯುವ ಈ ಕಥೆಯ ಚಿತ್ರೀಕರಣವನ್ನೂ ಮಂಗಳೂರು, ಉಡುಪಿ ಆಸುಪಾಸಿನಲ್ಲಿ ಸದ್ಯದಲ್ಲೇ ಆರಂಭಿಸಲಾಗುವುದು ಎಂದಿದ್ದಾರೆ ನಿರ್ದೇಶಕರು. ಜೋಯಲ್ ಶಮನ್ ಡಿಸೋಜ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನವಿದ್ದು, ಶರತ್ ಹೆಗ್ಡೆ, ಸತೀಶ್ ಪೆರ್ಡೂರು, ವಿಘ್ನೇಶ್ ಕುಲಾಲ್, ಕಿರಣ್ ಅಯ್ಯರ್, ಸುಧೀಂದ್ರ ವೆಂಕಟೇಶ್ ಮುಂತಾದವರು ಚಿತ್ರತಂಡದಲ್ಲಿದ್ದಾರೆ.