ಒಟಿಟಿಗೆ ಕಾಲಿಟ್ಟ ಈ ಸಿನಿಮಾಗಳನ್ನು ನೀವು ನೋಡ್ಲೇಬೇಕು

Date:

  • ಒಟಿಟಿಗೆ ಕಾಲಿಟ್ಟ ಈ ಸಿನಿಮಾಗಳನ್ನು ನೀವು ನೋಡ್ಲೇಬೇಕು
  • OTT movies this week
  1. ಪಪ್ಪಿ Puppy

ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸುತ್ತುವ ಮನ ಸೆಳೆಯುವ ಚಿತ್ರ. ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದೃಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಅಭಿನಯದ‌ ಈ ಚಿತ್ರ ಮೇ 1ಕ್ಕೆ ತೆರೆಕಂಡಿತ್ತು. ಪಪ್ಪಿ ಚಿತ್ರವನ್ನು ಶಿವಣ್ಣ, ರಮ್ಯಾ ಸೇರಿದಂತೆ ಚಿತ್ರರಂಗದ ಹಲವರು ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಪ್ರೈಂ ವೀಡಿಯೋದಲ್ಲಿ ಲಭ್ಯವಿದೆ ಈ ಚಿತ್ರ.

  1. ಯುದ್ಧಕಾಂಡ Yuddhakanda

ಪವನ್ ಭಟ್ ಆಕ್ಷನ್ ಕಟ್ ಹೇಳಿರುವ, ಕೃಷ್ಣ ಅಜೇಯ್ ರಾವ್ ನಟನೆ, ನಿರ್ಮಾಣವಿರುವ ಚಿತ್ರ “ಯುದ್ಧಕಾಂಡ” ಎರಡು ತಿಂಗಳ ಹಿಂದೆ ತೆರೆಗೆ ಬಂದಿತ್ತು. ಶೋಷಣೆಗೆ ಒಳಗಾದ ಒಬ್ಬಳು ಹೆಣ್ಣಿಗೆ ಸರಿಯಾದ ಸಮಯಕ್ಕೆ ನ್ಯಾಯ ಸಿಗದಾದಾಗ ಅದು ಇನ್ನೊಂದು ಅಪರಾಧಕ್ಕೆ ಕಾರಣ ಆಗತ್ತೆ. ಹಾಗೇ ನ್ಯಾಯ ಸಿಗುವ ಕಾಲಕ್ಕೆ ನ್ಯಾಯಕ್ಕೆ ಹೋರಾಡಿದ ವ್ಯಕ್ತಿಯೇ ಇಲ್ಲದಿರುವ ಪರಿಸ್ಥಿತಿ. ಹೀಗೆಲ್ಲಾ ನ್ಯಾಯ ಅನ್ಯಾಯಗಳ, ಕಾನೂನು ವ್ಯವಸ್ಥೆಗಳ ಸುತ್ತ ಸುತ್ತತ್ತೆ ಯುದ್ಧಕಾಂಡದ ಕಥೆ. ಇದೀಗ ಅಮೆಜಾನ್ ಪ್ರೈಂ ವೀಡಿಯೋದಲ್ಲಿ ಲಭ್ಯವಿದೆ ಈ ಮೂವೀ.

  1. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು Nimma Vastugalige Neeve Javabdararu

ಜನವರಿ 10, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೇಶವ ಮೂರ್ತಿ ಆಕ್ಷನ್ ಕಟ್ ಹೇಳಿರುವ ಕ್ರೈಮ್, ಡ್ರಾಮಾ, ಆಂಥಾಲಜಿ ಮೂವೀ “ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು” ಇದೀಗ Sun next ನಲ್ಲಿ ಸ್ಟ್ರೀಮ್ ಆಗ್ತಿದೆ. ಕನ್ನಡ ಸಿನಿಮಾ ವಲಯಗಳಲ್ಲಿ ಸಕಾರಾತ್ಮಕ ರಿವ್ಯೂ ಪಡೆದಿದ್ದ ಸಿನಿಮಾ ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ಚಿತ್ರದಲ್ಲಿ ಮೂರು ಬಗೆಯ ಕಳ್ಳರ ಕಥೆಯನ್ನು ಹೇಳಲಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್ ಪತ್ನಿ ಜೊತೆಗೆ ರಿಲ್ಯಾಕ್ಸ್ ಮೂಡ್...

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ ಇಲ್ಲಿದೆ ನೋಡಿ

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ...

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್ ಹಾರರ್ ಎಲಿಮೆಂಟ್ ಗಳು ಟೀಸರ್ ನಲ್ಲಿ...

Are Are Yaro Evalu Song Lyrics – Andondittu Kaala Movie

Are Are Yaro Evalu Song Details: SongAre Are Yaro...