- ಓಟಿಟಿಯಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ವಾರ ರಿಲೀಸಾದ ಈ ಚಿತ್ರಗಳು: ಕನ್ನಡ ಡಬ್ ಸಿನಿಮಾಗೂ ಓಟಿಟಿ ಫಾಲೋವರ್ಸ್
- ಪ್ರಚಾರವಿಲ್ಲದೇ ಸುದ್ದಿಯಾದವು ಈ ವಿಭಿನ್ನ ಚಿತ್ರಗಳು
- ಕನ್ನಡದ ಸಿನಿ ರಸಿಕರಿಗೆ ಓಟಿಟಿಯಲ್ಲೂ ಹಬ್ಬ
ಕನ್ನಡದ ಎರಡು ಸಿನಿಮಾಗಳು ಓಟಿಟಿಯಲ್ಲಿ OTT Movies ಭಾರೀ ಸದ್ದು ಮಾಡ್ತಿದೆ. ಥಿಯೇಟರ್ ಗಳಲ್ಲಿ ಕಾಂತಾರ ಭಾರೀ ಜೋಶ್ ನಲ್ಲಿದ್ದರೆ ಓಟಿಟಿಯಲ್ಲಿ ಈ ಎರಡು ಮೂವಿಗಳು ಲೀಡ್ ನಲ್ಲಿವೆ. ಕೆಲವು ಸಮಯದ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಈ ಎರಡು ಚಿತ್ರಗಳು ಈ ವಾರ ಬಿಡುಗಡೆಗೊಂಡು ಸಂಚಲನ ಉಂಟುಮಾಡಿದೆ. ಯಾವುದು ಆ ಚಿತ್ರಗಳು? ಈ ಚಿತ್ರಗಳ ಸ್ಪೆಷಾಲಿಟಿ ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಅಬ್ಬರದ “ಜೂನಿಯರ್” Junior
ಕಳೆದ ವಾರ ಬಿಡುಗಡೆಯಾಗಬೇಕಿದ್ದ “ಜ್ಯೂನಿಯರ್” ಸಿನಿಮಾ ಈಗ ಮೂರು ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಾಗಿದೆ. ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಪುತ್ರ ಕಿರೀಟಿ Kireeti ಅವರ ನಟನೆಯ ಮೊದಲ ಚಿತ್ರವಾಗಿರುವುದರಿಂದ ವಿಶೇಷ ಗಮನ ಸೆಳೆದಿದೆ. ಕಿರೀಟಿಗೆ ಜೋಡಿಯಾಗಿ ಶ್ರೀಲೀಲಾ Shreeleela ನಟಿಸಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ Ravichandran, ಸುಧಾರಾಣಿ Sudharani, ಅಚ್ಯುತ್ ಕುಮಾರ್ Achuth Kumar ಸೇರಿದಂತೆ ದಿಗ್ಗಜ ಕಲಾವಿದರು ಕೂಡ ನಟಿಸಿದ್ದಾರೆ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳಿದ ಈ ಚಿತ್ರವನ್ನು ವಾರಾಹಿ ಚಲನಚಿತ್ರಂ ಬ್ಯಾನರ್ ಅಡಿಯಲ್ಲಿ ಸಾಯಿ ಕೊರಪಾಟಿ ನಿರ್ಮಿಸಿದ್ದಾರೆ. ತೆಲುಗು ವರ್ಷನ್ ಅಮೆಜಾನ್ ಪ್ರೈಮ್ ಮತ್ತು ಅಹಾ ಓಟಿಟಿಗಳಲ್ಲಿ ಲಭ್ಯವಿದ್ದರೆ, ಕನ್ನಡ ವರ್ಷನ್ ಮಾತ್ರ ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಪ್ರಚಾರವಿಲ್ಲದೇ ಸುದ್ದಿಯಾಗ್ತಿದೆ “ಗೌರಿಶಂಕರ”
“ಗೌರಿಶಂಕರ” Gourishankara ರವಿಚಂದ್ರನ್ ಮತ್ತು ಅಪೂರ್ವ ನಟಿಸಿರುವ ವಿಭಿನ್ನ ಕತೆಯುಳ್ಳ ಸಿನಿಮಾ. ಆದರೆ ಯಾವುದೇ ಪ್ರಚಾರವಿಲ್ಲದೆ ಬಿಡುಗಡೆಯಾದ ಕಾರಣ ಪ್ರೇಕ್ಷಕರ ಗಮನ ಸೆಳೆಯಲಾಗಿರಲಿಲ್ಲ. ಈಗ ಈ ಸಿನಿಮಾ ಸನ್ ನೆಕ್ಸ್ಟ್ Sun Next ಓಟಿಟಿಯಲ್ಲಿ ಲಭ್ಯವಾಗಿದೆ. ಮೂರೂವರೆ ಕೋಟಿ ವೆಚ್ಚದಲ್ಲಿ ನಿರ್ಮಿತ ಈ ಚಿತ್ರಕ್ಕೆ ಅನೀಸ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಎನ್. ಎಸ್. ರಾಜ್ಕುಮಾರ್ ಹೇಳುವಂತೆ, ಟಿವಿ ರೈಟ್ಸ್ ಮಾರಾಟವಾದ ಹಿನ್ನೆಲೆಯಲ್ಲಿ ದಿಢೀರನೆ ಸಿನಿಮಾ ಬಿಡುಗಡೆಯಾಗಿತ್ತು.
ಕನ್ನಡ ಡಬ್ಬಿಂಗ್ ಚಿತ್ರಕ್ಕೂ ಬೇಡಿಕೆ
ಅಲ್ಲದೇ ತಮಿಳಿನ “ಮದರಾಸಿ” ಸಿನಿಮಾ ಪ್ರೈಮ್ ವೀಡಿಯೋಗೆ ಬಂದಿದ್ದು, ಕನ್ನಡ ಡಬ್ ವರ್ಷನ್ ಸಹ ಸ್ಟ್ರೀಮಿಂಗ್ ಆಗಿದೆ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ Rukmini Vasanth ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನ “ಲಿಟಲ್ ಹಾರ್ಟ್ಸ್” ಸಿನಿಮಾ ಕೂಡ ಈಟಿವಿವಿನ್ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು ಕನ್ನಡದ ಡಬ್ ಚಿತ್ರಗಳೂ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.


