ಸದ್ದಿಲ್ಲದೆ ರಿಲೀಸ್ ಆಗ್ತಿದೆ “ಔಟ್ ಆಫ್ ಸಿಲಬಸ್”

Date:

  • ಸದ್ದಿಲ್ಲದೆ ರಿಲೀಸ್ ಆಗ್ತಿದೆ “ಔಟ್ ಆಫ್ ಸಿಲಬಸ್”
  • ಡಿಸೆಂಬರ್ 27ಕ್ಕೆ ರಿಲೀಸ್ ಆಗ್ತಿದೆ “ಔಟ್ ಆಫ್ ಸಿಲಬಸ್”
  • ಅಚ್ಯುತ್ ಕುಮಾರ್, ಯೋಗರಾಜ ಭಟ್ ಮುಂತಾದ ದಿಗ್ಗಜರ ಸಮಾಗಮ
  • ವರ್ಷದ ಕೊನೆಯಲ್ಲಿ ಹೊಸ ಟ್ರೆಂಡ್ ಹುಟ್ಟಿಸಲು ಸಿದ್ಧವಾಗಿದೆ ಮೂವಿ

ವಿಭಿನ್ನ ಕಥಾ ಹಂದರದ ಚಿತ್ರಗಳನ್ನು ಕೊಡಲು ಸದಾ ಸಿದ್ಧವಾಗಿರುವ ಕನ್ನಡ ಚಿತ್ರತಂಡ, ನಿರ್ದೇಶಕ, ನಿರ್ಮಾಪಕರು, ಹೊಸ ಪ್ರತಿಭೆಗಳು ಹೊಸ ಹೊಸ ಕತೆಗಳನ್ನು ಪ್ರೇಕ್ಷಕರ ಮುಂದಿಡಲು ಸದಾ ಉತ್ಸುಕರಾಗಿದ್ದಾರೆ. ಇಂತಹಾ ಸಿನಿಮಾಗಳಲ್ಲಿ ಒಂದು ಸದ್ದಿಲ್ಲದೇ ಸೆಟ್ಟೇರಿ ಡಿ.27 ರಂದು ಬಿಡುಗಡೆಗೆ ಸಿದ್ಧವಾಗಿರುವ “ಔಟ್ ಆಫ್ ಸಿಲಬಸ್”. Out of syllabus Kannada movie

ಔಟ್ ಆಫ್ ಸಿಲಬಸ್ ಜೀವನ ಪಾಠ

ಹೆಸರಿನ ಕಾರಣದಿಂದಲೇ ಕುತೂಹಲ ಹುಟ್ಟಿಸಿರುವ ಈ ಚಿತ್ರ, ಒಂದು ಕ್ರಾಂತಿಕಾರಿ ಚಿತ್ರವಾಗಲಿದೆ ಎಂದು ಸಿನಿಮಾ ತಂಡ ಹೇಳಿದೆ. ಪ್ರದೀಪ್ ದೊಡ್ಡಯ್ಯ ಅವರ ನಾಯಕತ್ವ ಹಾಗೂ ನಿರ್ದೇಶನವಿರುವ ಇದು “ರೆಗ್ಯೂಲರ್ ಸಿನಿಮಾ ಅಲ್ಲ. ಸಾಮಾನ್ಯವಾಗಿ ಬರುವ ಸಿನಿಮಾಗಳ ಸಿದ್ಧ ಸೂತ್ರಗಳನ್ನು ಪಕ್ಕಕ್ಕೆ ಇಟ್ಟು ಹೊಸ ಪ್ರಕಾರದ ಸಿನಿಮಾವನ್ನು ಪ್ರೇಕ್ಷಕರಿಗೆ ಕೊಡುತ್ತಿರುವುದಾಗಿ” ಚಿತ್ರತಂಡ ಹೇಳಿಕೊಂಡಿತ್ತು. ಸಿನಿಮಾ ಮೂಲಕ ಸಿನಿಮಾಸಕ್ತರಿಗೆ ವಿಶೇಷ ಅನುಭವ ನೀಡುವುದಲ್ಲದೇ, ಸ್ಯಾಂಡಲ್ ವುಡ್ ನ ತಾಕತ್ತನ್ನು ತೋರಿಸಬೇಕೆಂದು ತಂಡದ ಅಪೇಕ್ಷೆ. ಇಂದಿನ ಕಾಲದ ಸಂಬಂಧಗಳ ಎಳೆಯ ಮೇಲೆ ಕಥೆ ಹೆಣೆಯಲಾಗಿದೆ. ಮನಸ್ಸಿಗೆ ಇಷ್ಟವಾಗುವಂತಹಾ ಡೈಲಾಗ್ ಗಳೂ ಚಿತ್ರದಲ್ಲಿ ಇರಲಿದೆ.

ತಾರಾಗಣದಲ್ಲಿ ಘಟಾನುಘಟಿಗಳು

ವಿಜಯಕಲಾ ಸುಧಾಕರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾಯಕ, ನಿರ್ದೇಶಕ ಪ್ರದೀಪ್ ದೊಡ್ಡಯ್ಯ ಅವರಿಗೆ ನಾಯಕಿಯಾಘಿ ಹೃತಿಕಾ ಶ್ರೀನಿವಾಸ್ ಮಿಂಚಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಯೋಗರಾಜ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಮನ ಸೆಳೆಯುವಂತಹಾ ಟೀಸರ್ ಈಗಾಗಲೇ ಜನರ ಮನಗೆದ್ದಿದ್ದು, ಸಿನಿಮಾ ಸಿನಿಪ್ರಿಯರ ಮನಗೆಲ್ಲುತ್ತಾ, ಚಿತ್ರತಂಡದ ನಿರೀಕ್ಷೆ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.

Out Of Syllabus Official Trailer – Kannada Movie

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

“ಸು ಫ್ರಮ್ ಸೋ” ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ರಿವೀಲ್

“ಸು ಫ್ರಮ್ ಸೋ” ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ರಿವೀಲ್ ಚಿತ್ರತಂಡ ಸೆಟ್...

100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್ ಚಿತ್ರ “ಮಹಾವತಾರ ನರಸಿಂಹ”

100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್...

ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ

ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ ವಿಭಿನ್ನ ಕತೆ ಮತ್ತು ನಿರೂಪಣೆಯ...

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...