- “ಪಾಠಶಾಲಾ”; ಓದು ಇಲ್ಲ, ಓಡೋಗು ! ಎಂದ ನಿರ್ದೇಶಕ ಹೆದ್ದೂರು ಮಂಜುನಾಥ್
- ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದ “ಪಾಠಶಾಲಾ” ಟೀಸರ್ ರಿಲೀಸ್
- ಮಲೆನಾಡಿನ ತೀರ್ಥಹಳ್ಳಿ, ಕಮ್ಮರಡಿ ಭಾಗದಲ್ಲಿ ಶೂಟಿಂಗ್
ಸಿನಿಮಾಗಳು ಹಿಟ್ ಆಗ್ಬೇಕಾದ್ರೇ ಪೋಸ್ಟರ್ ನಿಂದ ಹಿಡಿದು ಮೂವೀ ಟೀಸರ್, ಟ್ರೈಲರ್ ಗಳು ಮಹತ್ವದ ಪಾತ್ರ ವಹಿಸುತ್ತವೆ. ಫರ್ಸ್ಟ್ ಲುಕ್ ನಲ್ಲೇ ಜನರಿಗೆ ಇಷ್ಟ ಆಗೋದು ಮುಖ್ಯ. ಎಮ್.ಎಸ್.ಸ್ಕ್ವೇರ್ ಮೂವೀಸ್, ಯು ಫ್ರೆಂಡ್ಸ್ ತೀರ್ಥಹಳ್ಳಿ ನಿರ್ಮಿಸುತ್ತಿರುವ, ಮಂಜುನಾಥ್ ಶೆಟ್ಟಿ ಹೆದ್ದೂರು Heddur Manjunath Shetty ನಿರ್ದೇಶನದ ಚಿತ್ರ “ಪಾಠಾಶಾಲಾ”ದ Patashala ಟ್ರೈಲರ್ ಇತ್ತೀಚೆಗಷ್ಟೇ ಹೊಬಂದಿದ್ದು ನೋಡುಗರಿಗೆ ಆಸಕ್ತಿ ಮೂಡಿಸುವಂತಿದೆ. ಸಿಹಿಕಹಿ ಚಂದ್ರು-ಗೀತಾ ದಂಪತಿಗಳು ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಹೆಚ್ ಎಸ್ ರಾಘವೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ವಿಜಯ್ ಶೆಟ್ಟಿ, “ಕೆರಭೇಟೆ” ಖ್ಯಾತಿಯ ಗೌರಿಶಂಕರ್, ರವೀಂದ್ರ ಸಿಂಗ್ ಮುಂತಾದವರು ಕಾರ್ಯಕ್ರಮದಲ್ಲಿ ತಂಡದ ಜೊತೆಗಿದ್ದರು.

ಮಲೆನಾಡಿನ ಪ್ರತಿಭೆಗಳ ಚಿತ್ರ
ಈಗಾಗಲೇ “ಗ್ಯಾಪಲ್ಲೊಂದು ಸಿನಿಮಾ”, “ಓಮಿನಿ” ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಅನುಭವ ಗಳಿಸಿರುವ ನಿರ್ದೇಶಕ ಮಂಜುನಾಥ್ ಗೆ ಇದು ಮೂರನೇ ಚಿತ್ರ. ಹದಿನೈದು ವರ್ಷಗಳ ಹಿಂದೆಯೇ ಬಣ್ಣದ ಲೋಕಕ್ಕೆ ಕಾಲಿರಿಸಿದ ಇವರಿಗೆ ಸಿಹಿಕಹಿ ಚಂದ್ರು, ಸುಧಾಕರ ಬನ್ನಂಜೆ ಅವರೇ ಗುರುಗಳು. ರವಿಚಂದ್ರನ್ ಮುಂತಾದ ಘಟಾನುಘಟಿ ಡೈರೆಕ್ಟರ್ ಗಳೊಂದಿಗೆ ಕೆಲಸ ಮಾಡಿದ ಅನುಭವವೂ ಇವರಿಗಿದೆ. ಪಾಠಾಶಾಲಾ ಚಿತ್ರವು ತೀರ್ಥಹಳ್ಳಿ ತಾಲೂಕಿನಲ್ಲೆ ಹೆಚ್ಚಾಗಿ ಶೂಟಿಂಗ್ ನಡೆಸಿದ್ದು ಸುಮಾರು ಶಾಲಾ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಕೊಟ್ಟು ಈ ಚಿತ್ರದಲ್ಲಿ ಅವರನ್ನು ಆಕ್ಟಿಂಗ್ ಮಾಡಲು ತಯಾರಿ ಮಾಡಲಾಗಿದೆ. 1980-90 ರ ಸಂದರ್ಭದ ಶಾಲಾ ಮಕ್ಕಳ ಮತ್ತು ಶಿಕ್ಷಕರ ಸಡುವಣ ಸಂಬಂಧದ ಕಥಾಹಂದರವನ್ನು ಹೆಣೆಯಲಾಗಿದೆ.

ಸದ್ಯದಲ್ಲೇ ತೆರೆಮೇಲೆ ನಿರೀಕ್ಷೆ
ಪಾಠಶಾಲಾ, ಓದು ಇಲ್ಲ, ಓಡೋಗು ಎನ್ನುವ ಅಡಿಬರಹದೊಂದಿಗೆ ಕುತೂಹಲ ಮೂಡಿಸುತ್ತಿದೆ. ಚಿತ್ರದಲ್ಲಿ ಹಿರಿಯ ಕಲಾವಿದರ ದಂಡಿದೆ. ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಡಬ್ಬಿಂಗ್ ಮುಕ್ತಾಯ ಹಂತದಲ್ಲಿದೆ. ಬೇಸಿಗೆ ರಜೆಗೂ ಮುನ್ನ ಚಿತ್ರವನ್ನು ತೆರೆಗೆ ತರುವ ಯೋಚನೆ ನಿರ್ದೇಶಕರಿಗೆ ಇದೆ.