- ಈ “ಪೆನ್ ಡ್ರೈವ್” ನಲ್ಲಿ ಏನಿರಬಹುದು? ಜುಲೈ 4 ರಂದು “ಪೆನ್ ಡ್ರೈವ್” ರಿಲೀಸ್
- ಸೆಬಾಸ್ಟಿಯನ್ ಡೇವಿಡ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
- ಬಿಗ್ ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ ಮತ್ತು ಕಿಶನ್ ಪ್ರಮುಖ ಪಾತ್ರಗಳಲ್ಲಿದ್ದಾರೆ
ಸಂಚಲನ ಉಂಟು ಮಾಡುವ ಟೈಟಲ್ ಹೊಂದಿರುವ ಹೊಸ ಚಿತ್ರ “ಪೆನ್ ಡ್ರೈವ್” Pendrive ಜುಲೈ 4 ರಂದು ಬಿಡುಗಡೆಯಾಗಲಿದೆ. ಸೆಬಾಸ್ಟಿಯನ್ ಡೇವಿಡ್ Sebastian David ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಟಿ ಮಾಲಾಶ್ರೀ Malashree ನಟನೆಯ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ Thanisha Kuppanda ಮತ್ತು ಕಿಶನ್ Kishan ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಈ ಚಿತ್ರಕ್ಕೆ ಆರ್.ಎಚ್ ಎಂಟರ್ ಪ್ರೈಸಸ್ ನ ಎನ್ ಹನುಮಂತರಾಜು ಮತ್ತು ಲಯನ್ ಎಸ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕೂಡ ಅದ್ದೂರಿಯಾಗಿ ನಡೆದಿದೆ.
ನಿರೀಕ್ಷೆಗಳನ್ನು ಹುಟ್ಟಿಸಿದೆ “ಪೆನ್ ಡ್ರೈವ್”
ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮತ್ತು ಎನ್ ಹನುಮಂತರಾಜು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ ಮತ್ತು ನಾಗೇಶ್ ಅವರ ಸಂಕಲನವಿದೆ. ನಾಗೇಶ್ ಅವರು ಚಿತ್ರಕಥೆಗೂ ಸಾಥ್ ನೀಡಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕೀಯದಲ್ಲಿ ಇತ್ತೀಚೆಗೆ ಸಂಕಲನ ಉಂಟು ಮಾಡಿದ “ಪೆನ್ ಡ್ರೈವ್” ಎನ್ನುವ ಪದವನ್ನೇ ಸಿನಿಮಾಗೂ ಬಳಸಿದ್ದು ಸಿನಿಮಾ ಕುರಿತು ಹಲವು ನಿರೀಕ್ಷೆಗಳನ್ನೂ ಹುಟ್ಟಿಸಿದೆ.