- ಅಂತರಾಷ್ಟ್ರೀಯ ಅಂಗಳದಲ್ಲಿ ಸದ್ದು ಮಾಡಿದ ತುಳು ಚಿತ್ರ “ಪಿದಾಯಿ” ಸೆ.12 ರಂದು ರಿಲೀಸ್
- ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ ‘ಮಹಾಮಯಿ’ ಪಾತ್ರದಲ್ಲಿ ನಟಿಸಿದ್ದಾರೆ
- ತುಳು ಸಂಪ್ರದಾಯಕ್ಕೆ ತಕ್ಕ ಹಾಗೆ ಸಿನಿಮಾ ಮೂಡಿಬಂದಿದೆ
ಹಲವು ಕಡೆ ಪ್ರಶಸ್ತಿ ಪಡೆದು ಸಖತ್ ಸುದ್ದಿಯಲ್ಲಿರುವ ಬಹುನಿರೀಕ್ಷಿತ ತುಳು ಚಿತ್ರ “ಪಿದಾಯಿ” Pidayi ಸೆ.12 ರಂದು ತೆರೆಗೆ ಬರಲಿದೆ. ನಮ್ಮ ಕನಸು ಬ್ಯಾನರ್ Kanasu ಅಡಿಯಲ್ಲಿ ಕೆ ಸುರೇಶ್ K Suresh ನಿರ್ಮಿಸಿ, ರಮೇಶ್ ಶೆಟ್ಟಿಗಾರ್ Ramesh Shettigar ಬರೆದು, ಸಂತೋಷ್ ಮಾಡ Santhosh Mada ನಿರ್ದೇಶಿಸಿದ ಚಿತ್ರವಿದು. ಈಗಾಗಲೇ ಕೋಲ್ಕತ್ತಾ, ಶಿಮ್ಲಾ, ಜಾರ್ಖಂಡ್ ಮತ್ತು ಕ್ಯಾಲಿಫೋರ್ನಿಯಾ ಸೇರಿದಂತೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತವಾಗಿ ಆಯ್ಕೆಯಾಗುವ ಮೂಲಕ ಪಿದಾಯಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ಚಿತ್ರ ”ಪಿದಾಯಿ”.
ಬಹುಪ್ರತಿಭಾನ್ವಿತರ ತಾರಾಗಣ
ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ Sharath Lohithashva “ಮಹಾಮಯಿ” ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ದೀಪಕ್ ರೈ ಪಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಲಾ ವಿಟ್ಲ, ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ ಮತ್ತು ಬಾಲ ನಟರಾದ ಮೋನಿಶ್, ತ್ರಿಶಾ, ಧ್ರುವ, ನೇಹಾ, ಖುಷಿ, ಡಿಬಿಸಿ ಶೇಖರ್ ಮತ್ತು ಅನಿತಾ ಚಂದ್ರಶೇಖರ್ ತಾರಾಗಣದಲ್ಲಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಉನ್ನಿ ಮದವೂರು ನಿರ್ವಹಿಸಿದ್ದಾರೆ. ಸುರೇಶ್ ಅರಸ್ ಸಂಕಲನವಿದೆ. ರಮೇಶ್ ಶೆಟ್ಟಿಗಾರ್ ಮತ್ತು ಡಿಬಿಸಿ ಶೇಖರ್ ಸಂಭಾಷಣೆಯಿದೆ. ಅಜಯ್ ನಂಬೂದಿರಿ ಸಂಗೀತವಿದೆ. ಖ್ಯಾತ ಗಾಯಕ ಡಾ. ವಿದ್ಯಾಭೂಷಣ್ ಅವರು ಮೊದಲ ಬಾರಿಗೆ ಈ ಚಿತ್ರದ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ.
ತುಳು ಸಂಪ್ರದಾಯಕ್ಕೆ ತಕ್ಕ ಹಾಗೆ ಸಿನಿಮಾ
ಕಲಾ ನಿರ್ದೇಶನದಲ್ಲಿ ರಾಜೇಶ್ ಬಂಡ್ಯೋಡು, ಮುಖ್ಯ ಸಹಾಯಕ ನಿರ್ದೇಶನದಲ್ಲಿ ವಿಘ್ನೇಶ್ ಕುಲಾಲ್. ಸಹಾಯಕ ನಿರ್ದೇಶನದಲ್ಲಿ ಗಿರೀಶ್ ಆಚಾರ್ ಸುಳ್ಯ, ಪ್ರದೀಪ್ ರಾವ್ ಮತ್ತು ವಿಶ್ವ ಮಂಗಲ್ಪಾಡಿ ಸಾಥ್ ನೀಡಿದ್ದಾರೆ. ಪಿದಾಯಿ ಚಿತ್ರದಲ್ಲಿ ಸಾಂಪ್ರದಾಯಿಕ ತುಳು ಕಲಾ ಪ್ರಕಾರವಾದ ಕುಣಿತ ಭಜನೆಯನ್ನು ತರಲಾಗಿದೆ. ತುಳು ಸಂಪ್ರದಾಯಕ್ಕೆ ತಕ್ಕ ಹಾಗೆ ಸಿನಿಮಾ ಮೂಡಿಬಂದಿದೆ. ಈ ಚಿತ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಮತ್ತು ಮಂಜೇಶ್ವರದ ಗಡಿ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದ್ದು ಪ್ರೇಕ್ಷಕರು “ಪಿದಾಯಿ” ನೋಡಲು ಕಾತರದಿಂದ ಕಾಯುತ್ತಿದ್ದಾರೆ.