- ಸೆಟ್ಟೇರಲಿದೆ “ಪವರ್ ಸ್ಟಾರ್ ಧರೆಗೆ ದೊಡ್ಡವನು”
- ಈ ಚಿತ್ರಕ್ಕೆ ನಾಯಕ ಹಾಗೂ ನಿರ್ದೇಶಕನಾಗಿ ಮಿಂಚಿದ್ದಾರೆ ನಟ ಸೂರ್ಯ
- ವಿಶೇಷ ತಂತ್ರಜ್ಞಾನದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಪವರ್ ಸ್ಟಾರ್
ಪವರ್ ಸ್ಟಾರ್ ನಿಧನದ ಬಳಿಕ ಅವರ ಹೆಸರಿನಲ್ಲಿ, ಅವರ ನೆನಪಿನೊಂದಿಗೆ ನಡೆಯುತ್ತಿರುವ ಕಾರ್ಯಗಳು ಅನೇಕ. ಸಿನಿಮಾದಿಂದ ಹಿಡಿದ ಸಾಮಾಜಿಕ ಕಾಳಜಿಯ ಕೆಲಸಗಳವರೆಗೂ ಅವರ ಅಭಿಮಾನಿ ಬಳಗದ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅದೇ ಹಾದಿಯಲ್ಲಿ ಈಗ ಹೊಸದಾಗಿ ಸೆಟ್ಟೇರಲಿದೆ “ಪವರ್ ಸ್ಟಾರ್ ಧರೆಗೆ ದೊಡ್ಡವನು” Power Star Dharege Doddavanu ಸಿನಿಮಾ. ಬಹುತೇಕ ಹೊಸಪ್ರತಿಭೆಗಳ ಈ ಚಿತ್ರದ ಮೊದಲ ದೃಶ್ಯಕ್ಕೆ ನಿರ್ದೇಶಕ ಶಶಾಂಕ್ Shashank ಹಾಗೂ ನಟ ಸುಚೇಂದ್ರ ಪ್ರಸಾದ್ Suchendra Prasad ಇವರುಗಳ ಅಮೃತ ಹಸ್ತದಿಂದ ಚಾಲನೆ ದೊರೆತಿದೆ.
ಕಣ್ಣಿಲ್ಲದ ಪುಟ್ಟ ಹುಡುಗಿಯ ಕಥೆ
ಕಣ್ಣಿಲ್ಲದ ಪುಟ್ಟ ಮಗುವೊಂದಕ್ಕೆ ದೃಷ್ಟಿ ಬಂದ ನಂತರ ಆ ಹುಡುಗಿಯು ತನ್ನ ಆಸೆ ನೆರವೇರಿಸಿಕೊಳ್ಳಲು ಹೊರಡುವ ಕಥೆಯೇ ಈ ಚಿತ್ರದ ಜೀವಾಳ. ಚಿತ್ರದಲ್ಲಿ ವಿಶೇಷ ತಂತ್ರಜ್ಞಾನದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ Soorya ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರೊಂದಿಗೆ ನಾಯಕನ ಪಾತ್ರ ನಿರ್ವಹಿಸಲಿದ್ದಾರೆ. ರಿಯಾಲಿಟಿ ಶೋ ನಲ್ಲಿ ಫೇಮಸ್ ಆಗಿರುವ ಜ್ಞಾನ ಗುರುರಾಜ್ Jnana Gururaj, ಸುಚೇಂದ್ರ ಪ್ರಸಾದ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಮೂರ್ತಿ ಸಂಗೀತ, ವಿಜಯ್ ಭಾಸ್ಕರ್ ಛಾಯಾಗ್ರಹಣ ಚಿತ್ರಕ್ಕಿದೆ.