- “ಮುಗಿಲ ಮಲ್ಲಿಗೆ” ಪಾಸಿಟಿವ್ ರೋಲ್ ನಲ್ಲಿ ಬಾಹುಬಲಿ ಕಾಲಕೇಯ ಖ್ಯಾತಿಯ ಪ್ರಭಾಕರ್
- ತೆಲಗು ಚಿತ್ರರಂಗದ ವಿಲನ್ ಪಾತ್ರಗಳಲ್ಲಿ ಫೇಮಸ್ ಆಗಿರುವ ನಟ ಪ್ರಭಾಕರ್
- ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ, ಗಜಕೇಸರಿ, ಬಿಚ್ಚುಗತ್ತಿ ಮತ್ತು ಬೃಂದಾವನ ಮುಂತಾದ ಕನ್ನಡ ಚಿತ್ರಗಳಲ್ಲಿ ನಟನೆ
- ಇದೀಗ ಪಾಸಿಟಿವ್ ರೋಲ್ ನಲ್ಲಿ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ
ತೆಲುಗು ಬ್ಲಾಕ್ ಬಸ್ಟರ್ ಗಳಾದ ಅಖಂಡ, ಡಿಜೆ, ಸ್ಕಂದ ಮತ್ತು ವಿಶಾಲ್ ಮತ್ತು ವಿಜಯ್ ಸೇತುಪತಿಯಂತಹ ತಾರೆಗಳ ಜೊತೆಗೆ ತಮಿಳು ಹಿಟ್ ಗಳಲ್ಲಿನ ಅಭಿನಯಕ್ಕಾಗಿ, ನೆಗೆಟಿವ್ ರೋಲ್ ಮೂಲಕ ತೆಲುಗು ಚಿತ್ರರಂಗದಲ್ಲಿ ಹೆಸರಾಗಿದ್ದಾರೆ ಪ್ರಭಾಕರ್. ಬಾಹುಬಲಿ ಚಿತ್ರದಲ್ಲಿನ ಕಾಲಕೇಯನ ಪಾತ್ರದಲ್ಲಿ ಜನರ ಮನಸೂರೆಗೊಂಡಿದ್ದ ನಟ ಇವರು. ಇದೀಗ ಆರ್.ಕೆ. ಗಾಂಧಿ ನಿರ್ದೇಶನದ ಮುಂಬರುವ ಚಿತ್ರ ‘ಮುಗಿಲ ಮಲ್ಲಿಗೆ’ Mugila Mallige Movie ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾವನಾತ್ಮಕ ಅಭಿನಯದೊಂದಿಗೆ ಪಾಸಿಟಿವ್ ರೋಲ್
ಸದಾ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟರು ಬೇರೆ ಪಾತ್ರಗಳನ್ನು ಮಾಡಹೊರಟರೆ ಪ್ರೇಕ್ಷಕರಿಗೆ ಮೆಚ್ಚುಗೆಯೊಂದಿಗೆ ಅಚ್ಚರಿಯೂ ಉಂಟಾಗುತ್ತದೆ. ಹಾಗೇ ಇದೀಗ ಪ್ರಭಾಕರ್ ‘ಮುಗಿಲ ಮಲ್ಲಿಗೆ’ಯಲ್ಲಿ ಭಾವನಾತ್ಮಕ ಅಭಿನಯದೊಂದಿಗೆ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಆರ್ ಕೆ ಗಾಂಧಿ ಅವರ ಸಾಹಿತ್ಯ ಮತ್ತು ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ಇರುವ “ಜೀವಗಳ ನಡುವೆ ಪ್ರೀತಿಯಿಲ್ಲದೆ, ಜೀವನವು ಅದರ ಅರ್ಥವನ್ನು ಕಳೆದುಕೊಳ್ಳುತ್ತದೆ” ಎನ್ನುವ ಹಾಡಿಗೆ ಭಾವನೆಗಳನ್ನು ತುಂಬಿ ಮನಸೆಳೆಯುವಂತೆ ಅಭಿನಯಿಸಿದ್ದಾರೆ ಪ್ರಭಾಕರ್.

ಎಎನ್ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎ ನಾಗರಾಜ್ ರೆಡ್ಡಿ ನಿರ್ಮಿಸಿರುವ ಮುಗಿಲ ಮಲ್ಲಿಗೆ ಚಿತ್ರಕ್ಕೆ ಆರ್.ಕೆ. ಗಾಂಧಿ ನಿರ್ದೇಶನ, ಚಿತ್ರಕಥೆ ಮತ್ತು ಸಂಭಾಷಣೆ ಇದೆ. ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಹಾಗು ಸಹನಾ ಚಂದ್ರಶೇಖರ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಅಭಿನಂದನ್ ಶೆಟ್ಟಿ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ರಾಜೀವ್ ಕೃಷ್ಣ ಅವರ ಸಾಹಿತ್ಯ, ವಿನಯ್ ಜಿ. ಆಲೂರು ಅವರ ಸಂಕಲನ ಮತ್ತು ಥ್ರಿಲ್ಲರ್ ಮಂಜು ಅವರ ಸಾಹಸ ದೃಶ್ಯಗಳ ಸಂಯೋಜನೆಯನ್ನು ಒಳಗೊಂಡಿದೆ. ಕಂಬಳಿಪುರ, ಕಾಟೇರಮ್ಮ, ಕೊಳತ್ತೂರು, ಭಕ್ತರಹಳ್ಳಿ, ಗಟ್ಟಿಗನಬ್ಬೆ, ಸಕಲೇಶಪುರ, ಮಡಿಕೇರಿ ಮುಂತಾದ ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.