- ಆಡಿಯೋ ಬಿಡುಗಡೆಗೆ ಜಪಾನ್ ಗೆ ಹಾರಲಿದ್ದಾರೆ ಪ್ರಭಾಸ್?
- ಜಪಾನ್ ನಲ್ಲಿ ಪ್ರಭಾಸ್ ಗೆ ಇದ್ದಾರೆ ಭರ್ಜರಿ ಅಭಿಮಾನಿಗಳು
- ಶೂಟಿಂಗ್ ಮುಕ್ತಾಯದ ಹಂತದಲ್ಲಿರುವ “ರಾಜಾ ಸಾಬ್” ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ
ಇತ್ತೀಚೆಗೆ ಭಾರತೀಯ ಸಿನಿಮಾಗಳು ಹಲವು ದೇಶಗಳಲ್ಲಿ ಬಿಡುಗಡೆಯಾಗುವುದು, ಹಿಟ್ ಆಗುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೇ ಹಲವು ಸಿನಿತಂಡಗಳು ಸಿನಿಮಾಕ್ಕೆ ಸಂಬಂಧಿಸಿದ ಹಲವು ಇವೆಂಟ್ ಗಳನ್ನೂ ವಿದೇಶಗಳಲ್ಲಿ ಹಮ್ಮಿಕೊಂಡು ಅನಿವಾಸಿ ಭಾರತೀಯರನ್ನಲ್ಲದೇ ವಿದೇಶಿಗರನ್ನೂ ಚಿತ್ರ ನೋಡಲು ಸೆಳೆಯುತ್ತಿವೆ. ಆದರೆ ಜಪಾನ್ ನಲ್ಲಿ ಈ ರೀತಿಯ ಯಾವುದೇ ಕಾರ್ಯಕ್ರಮಗಳೂ ನಡೆದ ನಿದರ್ಶನಗಳಿಲ್ಲ. ಇತ್ತೀಚೆಗಷ್ಟೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜಪಾನ್ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದರ ಪ್ರಭಾವದಿಂದ ಇದೀಗ ಪ್ರಭಾಸ್ ನಟನೆಯ ಹೊಸ ಸಿನಿಮಾ “ರಾಜಾ ಸಾಬ್” ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಜಪಾನ್ನಲ್ಲೇ ಆಯೋಜಿಸಲಾಗುತ್ತಿದೆ ಎಂಬ ಸುಳಿವು ಸಿಕ್ಕಿದೆ.

ದಶಕಗಳಿಂದಲೂ ಭಾರತೀಯ ಚಿತ್ರಗಳಿಗೆ ಬೇಡಿಕೆ
ಹಿಂದಿಯ ‘ಆವಾರ’ ಸೇರಿದಂತೆ ಹಲವು ಸಿನಿಮಾಗಳು ಜಪಾನ್ನಲ್ಲಿ ಭಾರಿ ಹಿಟ್ ಆಗಿದ್ದವು. ರಜನೀಕಾಂತ್ ನಟನೆಯ ‘ಮುತ್ತು’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತಲ್ಲದೇ, ರಜನೀಕಾಂತ್ ಗೆ ದೊಡ್ಡ ಅಭಿಮಾನಿ ವರ್ಗ ಜಪಾನ್ನಲ್ಲಿ ಇದೆ. ಸುದೀಪ್ ನಟನೆಯ ‘ಈಗ’ ಸಿನಿಮಾ ಕೂಡಾ ಜಪಾನ್ ನಲ್ಲಿ ಕಮಾಲ್ ಮಾಡಿತ್ತು.
ರಾಜಾ ಸಾಬ್ ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದು,ಹಾಡುಗಳು ಸಕ್ಕಾತ್ತಾಗಿವೆ ಎಂದಿದ್ದಾರೆ ಸಿನಿಮಾದ ನಿರ್ಮಾಪಕರು, ಅಲ್ಲದೇ ಈ ಚಿತ್ರದ ಹಾಡುಗಳ ಜಪಾನೀಸ್ ವರ್ಷನ್ ಕೂಡಾ ತಾಯಾರಾಗುತ್ತಿದ್ದು ಜಪಾನ್ ನಲ್ಲಿ ನೆಲೆಸಿರುವ ಭಾರತೀಯರಲ್ಲದೇ, ಜಪಾನೀಯರೂ ಮೆಚ್ಚುವಂತೆ ಮಾಡಲಾಗುತ್ತಿದೆ.