- ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ
- ವಿಭಿನ್ನ ಕತೆ ಮತ್ತು ನಿರೂಪಣೆಯ ಕಾರಣಕ್ಕೆ ಹಿಟ್ ಆಗಿತ್ತು ರವಿ ಬಸ್ರೂರು ನಿರ್ದೇಶನದ ಕಟಕ ಚಿತ್ರ
- ಇದೀಗ ಕಟಕ ಚಿತ್ರದ ಭಾಗ-2 ಸಿನಿಮಾದ ಟೈಟಲ್ ಟ್ರ್ಯಾಕ್ ಕೂಡ ಸದ್ದಿಲ್ಲದೇ ಬಿಡುಗಡೆ ಆಗಿದೆ
ರವಿ ಬಸ್ರೂರು Ravi Basrur ನಿರ್ದೇಶನದ ಕಟಕ Kataka ಚಿತ್ರ ಈ ಹಿಂದೆ ವಿಭಿನ್ನ ಕತೆ ಮತ್ತು ನಿರೂಪಣೆಯ ಕಾರಣಕ್ಕೆ ಹಿಟ್ ಆಗಿತ್ತು. ನೈಜ ಘಟನೆಯಾಧಾರಿತವಾಗಿದ್ದ ಈ ಚಿತ್ರದ ಕತೆಯಲ್ಲಿ ಹಳ್ಳಿಯಲ್ಲಿ ನಡೆಯುವ ಹಾರರ್ ಹಾಗೂ ಸಸ್ಪೆನ್ಸ್ ಅಂಶಗಳು ಎಲ್ಲರ ಗಮನಸೆಳೆಯುಂತೆ ಮಾಡಿದ್ದವು. ಇದೇ ಕಾರಣಕ್ಕೆ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಟ್ಟಿದ್ದರು ಕೂಡ. ಚಿತ್ರದಲ್ಲಿ ಅಶೋಕ್ ರಾಜ್, ಸ್ಪಂದನ ಪ್ರಸಾದ್ ಹಾಗೂ ಶಾಲಗಾ ಸಾಲಿಗ್ರಾಮ ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಇದೀಗ ಕಟಕ ಚಿತ್ರದ ಭಾಗ-2 ಬರುತ್ತೆ ಎಂದು ಚಿತ್ರತಂಡ ಸುಳಿವು ನೀಡಿದ್ದು ಈ ಸಿನಿಮಾದ ಟೈಟಲ್ ಟ್ರ್ಯಾಕ್ ಕೂಡ ಸದ್ದಿಲ್ಲದೇ ಬಿಡುಗಡೆ ಮಾಡಿದೆ.
ನಿರೀಕ್ಷೆ ಸಹಜವಾಗಿಯೇ ಇದೆ
ಕಟಕ-2 ಸಿನಿಮಾದ ಇಂಗ್ಲಿಷ್ ವರ್ಷನ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು ಆಕರ್ಷಕವಾಗಿದೆ. ಇದಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂತೋಷ್ ವೆಂಕಿ, ಐರಾ ಉಡುಪಿ ಹಾಗೂ ರೋಹಿತ್ ಸಿದ್ದಪ್ಪ ಈ ಟ್ರ್ಯಾಕ್ಗೆ ಧ್ವನಿಯಾಗಿದ್ದಾರೆ. ಈ ಟೈಟಲ್ ಟ್ರ್ಯಾಕ್ ಕಟಕ 2 ಚಿತ್ರದ ಕುರಿತು ಕುತೂಹಲ ಮೂಡಿಸಿದೆ. ಆದರೆ ಕಟಕ 2 ಯಾವಾಗ ಬರಲಿದೆ? ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ? ಎನ್ನುವ ಗುಟ್ಟನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಚಿತ್ರದಲ್ಲಿ ವಿಭಿನ್ನ ಸಸ್ಪೆನ್ಸ್ ಅಂಶಗಳು, ಕಥಾಹಂದರ ಮತ್ತು ಸಂಗೀತ ಸದ್ದು ಮಾಡಲಿದೆ ಎನ್ನುವ ನಿರೀಕ್ಷೆ ಸಹಜವಾಗಿಯೇ ಇದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ರವಿ ಬಸ್ರೂರ್ ಟೀಂ ನ, “ವೀರ ಚಂದ್ರಹಾಸ” Veera Chandrahasa ಚಿತ್ರವನ್ನು ಕ್ಲಾಸ್ ಆಡಿಯನ್ಸ್ ಸಖತ್ತಾಗಿ ಮೆಚ್ಚಿಕೊಂಡಿದ್ದರು. ಅದಕ್ಕಿಂತಲೂ ಒಳ್ಳೆಯ ಮೆಚ್ಚುಗೆ ಕಟಕ 2 ಗೆ ಸಿಗುವ ನಿರೀಕ್ಷೆ ಇದೆ. ಇದೀಗ ತೆರೆಮರೆಯಲ್ಲಿ ಕಟಕ-2 ಚಿತ್ರಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು ಚಿತ್ರತಂಡ ಕಟಕ 2 ಕುರಿತು ಹೆಚ್ಚಿನ ವಿವರಗಳನ್ನು ಸದ್ಯದಲ್ಲಿಯೇ ನೀಡಲಿದೆ ಎಂದು ಹೇಳಲಾಗುತ್ತಿದೆ.