ಸದ್ಯದಲ್ಲೇ ತೆರೆಯ ಮೇಲೆ “ಪ್ರೀತಿ ಪ್ರೇಮ ಪಂಗನಾಮ”

Date:

  • ಸದ್ಯದಲ್ಲೇ ತೆರೆಯ ಮೇಲೆ “ಪ್ರೀತಿ ಪ್ರೇಮ ಪಂಗನಾಮ”
  • ಉದಯ ವಾಹಿನಿಯ ಖ್ಯಾತ ಹಾಸ್ಯ-ಲಾಸ್ಯ ಧಾರವಾಹಿ ಜೋಡಿಗಳ ಹೊಸಚಿತ್ರ
  • ಜೊತೆಗೂಡಿ ಕಾಮಿಡಿ ಚಿತ್ರ ಮಾಡಿದ್ದಾರೆ ಡಾ.ಮುತ್ತುರಾಜ್ ಎಂ.ಎಸ್. ಹಾಗೂ ಶ್ರೀಕಂಠ ಬಿ.ಎ.

ಉದಯ ವಾಹಿನಿಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಹಾಸ್ಯ ಲಾಸ್ಯ Hasya Lasya ಎಂಬ ಕಾಮಿಡಿ ಧಾರವಾಹಿಯನ್ನು ಬಿತ್ತರಿಸಿ ಮನೆಮಂದಿಯನ್ನೆಲ್ಲಾ ನಗೆಗಡಲಿನಲ್ಲಿ ತೇಲುವಂತೆ ಮಾಡಿದ ಖ್ಯಾತಿ ಡಾ.ಮುತ್ತುರಾಜ್ ಎಂ.ಎಸ್. D.Mutturaj M S ಹಾಗೂ ಶ್ರೀಕಂಠ ಬಿ.ಎ. Shrikanta B A ಜೋಡಿಯದ್ದು. ಇದೀಗ ಈ ಜೋಡಿ “ಪ್ರೀತಿ ಪ್ರೇಮ ಪಂಗನಾಮ” Preethi Prema Panganama ಎಂಬ ಹೊಸ ಚಿತ್ರದ ಮೂಲಕ ಕನ್ನಡಿಗರನ್ನು ನಗಿಸಲು ಮತ್ತೆ ಸಿದ್ದರಾಗಿದ್ದಾರೆ. ಡಾ.ಮುತ್ತುರಾಜ್ ಎಂ.ಎಸ್. ಬಂಡವಾಳ ಹೂಡಿದ್ದು, ಶ್ರೀಕಂಠ ಬಿ.ಎ. ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇವರಿಗೆ ಸಾಹಿತ್ಯ ಹಾಗೂ ಸಹನಿರ್ದೇಶನದಲ್ಲಿ ಕೈ ಜೋಡಿಸಿದ್ದಾರೆ ಯುವ ಪ್ರತಿಭೆ ಶ್ರೀಕಾಂತ್ ಕುಮಾರ್ ತುಮಕೂರು.

ಹಾಸ್ಯದೊಂದಿಗೆ ಉತ್ತಮ ಸಂದೇಶ ಬೆರೆತ ಸಿನಿಮಾ

ನಿರ್ದೇಶಕರು ಹೇಳುವಂತೆ “ಹಿಂದಿನ ಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಬೆಲೆ ಇತ್ತು. ಆದರೆ ಇಂದು ಆರು, ಮೂರು, ಎರಡು, ಒಂದು ತಿಂಗಳು. ಕೊನೆಗೆ ಮೂರೇ ದಿವಸಕ್ಕೆ ದುಡ್ಡು ಇಲ್ಲವೇ ಕೊಲೆಯಲ್ಲಿ ಅಂತ್ಯಕಾಣುತ್ತದೆ. ಜಗತ್ತಿನಲ್ಲಿ ಜಾತಿಗಿಂತ ದೊಡ್ಡದು ಪ್ರೀತಿ. ಗಂಡು-ಹೆಣ್ಣು ಎರಡೇ ಜಾತಿ ಇರುವುದು. ಈ ಚಿತ್ರದ ಮೂಲಕ ಹಾಸ್ಯದೊಂದಿಗೆ ಒಂದಷ್ಟು ಉತ್ತಮ ಸಂದೇಶಗಳನ್ನೂ ಸಮಾಜಕ್ಕೆ ಕೊಡುವ ಪ್ರಯತ್ನ ಮಾಡಲಾಗಿದೆ” ಎಂದಿದ್ದಾರೆ.

ಹೊಸ ಪ್ರತಿಭೆಗಳ ತಂಡ

ಧೀರಜ್, ಉದಯ್ ನಾಯಕರಾಗಿ ನಟಿಸಿದ್ದು ಇವರಿಗೆ ಸಾಥ್ ನೀಡಿದ್ದಾರೆ ಡಯಾನಾ ಮತ್ತು ಚೈತ್ರ. ಕುಮಾರ್ ಈಶ್ವರ್ ಸಂಗೀತ, ಗುರುರಾಜ್ ಛಾಯಾಗ್ರಹಣ, ದೊಡ್ಡಮನೆ ಗಣೇಶ್ ಸಂಕಲನ ಚಿತ್ರಕ್ಕಿದೆ. ಸುಚಿತ್ ಫಿಲಂಸ್ ನ ವೆಂಕಟ್ ಗೌಡ ಸಾರಥ್ಯದಲ್ಲಿ ಮೇ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು “ನಾನು ಮತ್ತು ಗುಂಡ 2”...