- “ಟೆಡ್ಡಿ ಬೇರ್” ನಲ್ಲಿ ಭರವಸೆಯ ನಟ ಸುಪ್ರೀಂ ಸ್ಟಾರ್ ಭಾರ್ಗವ ಹೊಸ ಪಾತ್ರದಲ್ಲಿ ಮಿಂಚಿಂಗ್
- ಸೈಕೋಲಾಜಿಕಲ್, ಥ್ರಿಲ್ಲರ್, ಹಾರರ್ ಮೂವಿ “ಟೆಡ್ಡಿಬೇರ್”
- ಹೊಸವರ್ಷದಲ್ಲಿ ತೆರೆಗೆ ಬರಲಿದೆ ಟೆಡ್ಡಿಬೇರ್
ಸದಾ ವಿಭಿನ್ನ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಲು ಕಾತುರರಾಗಿರುವ ಸ್ಯಾಂಡಲ್‌ವುಡ್ ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುತ್ತಿದೆ. ಸದ್ಯದಲ್ಲೇ ತೆರೆಗೆ ಬರುತ್ತಿರುವ “ಟೆಡ್ಡಿಬೇರ್” Teddy bear ಕೂಡಾ ಅಂತ ಮೂವಿಗಳಲ್ಲೊಂದು, ಹಾರರ್, ಥ್ರಿಲ್ಲರ್, ಸೈಕೋಲಾಜಿಕಲ್ ಕಥಾ ಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಮೂವಿಯ ಲುಕ್ ಹೊಂದಿದೆ.
ಭರವಸೆಯ ನಟ ಭಾರ್ಗವ
ಸಣ್ಣ ವಯಸ್ಸಿನಿಂದಲೇ ರಾಜ್ ಕುಮಾರ್ ಚಿತ್ರಗಳನ್ನು ನೋಡುತ್ತಾ, ಆರಾಧಿಸುತ್ತಾ ಬೆಳೆದ ಭಾರ್ಗವ್, Bhargav ಚಾಮರಾಜ್ ಮಾಸ್ಟರ್ ಬಳಿ ಅಭಿನಯ ತರಬೇತಿ ಪಡೆದಿದ್ದಾರೆ. ಡೇಟಿಂಗ್ ವಿತ್ ಸನ್ನಿ ವೆಬ್ ಸೀರೀಸ್ ಮೂಲಕ ಅಭಿನಯಕ್ಕೆ ಕಾಲಿಟ್ಟ ಇವರು, ‘ಪರಿಶುದ್ಧಂ’ ಚಿತ್ರದ ಮೂಲಕ ನಾಯಕರಾಗಿದ್ದಾರೆ. ಟೆಡ್ಡಿ ಬೇರ್ ಸಿನಿಮಾದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರ ಮಾಡಿರುವ ನಾಯಕ ಭಾರ್ಗವ್ ಅವರಿಗೆ ಈ ಚಿತ್ರ ಹೊಸತನವನ್ನು ನೀಡಿದೆ. ಹೊಸ ಪಾತ್ರಗಳನ್ನು, ವಿಭಿನ್ನ ಕತೆಗಳನ್ನು ಮಾಡಬೇಕೆಂಬ ಕನಸು ಹೊಂದಿರುವ ಇವರು ಪುನೀತ್ ರಾಜಕುಮಾರ್ ನೆನಪಿನೊಂದಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೊಂದವರಿಗೆ ಸಹಾಯಹಸ್ತ ಚಾಚುತ್ತಾ, ಸರಳವಾಗಿ ಜೀವನ ನಡೆಸುವ ಬಯಕೆ ಹೊಂದಿದ್ದಾರೆ.

ಟೆಡ್ಡಿಬೇರ್ ತಂಡದಲ್ಲಿ ಇವ್ರೆಲ್ಲಾ ಇದ್ದಾರೆ
ಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಭರತ್ ಕುಮಾರ್-ನವೀನ್ ರೆಗಟ್ಟಿ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಿ.ಲೋಕೇಶ್ ನಿರ್ದೇಶಕನಾಗಿ ಆಕ್ಷನ್-ಕಟ್ ಹೇಳಿದಾರೆ. ಮದುವೆಯಾಗಿ ನವದಂಪತಿ ಹೊಸಮನೆಗೆ ಹೋದಾಗ ಆಗುವ ಹಾಸ್ಯ ಸನ್ನಿವೇಶಗಳನ್ನೊಳಗೊಂಡ ಈ ಚಿತ್ರದಲ್ಲಿ ನಿರ್ದೇಶಕರು ಸಾಕಷ್ಟು ಸಂಶೋಧನೆ ಮಾಡಿರುವ ಸಾಧ್ಯತೆ ಕಾಣುತ್ತಿದೆ. ನಾಯಕಿಯರಾಗಿ ಶೈಲಜಾ ಸಿಂಹ, ದೀನಾ ಪೂಜಾರಿ ನಟಿಸಿದ್ದಾರೆ. ದಿಶಾ ಪೂವಯ್ಯ, ಮುತ್ತು, ಸ್ಪರ್ಶ ರೇಖಾ, ಕಿಟ್ಟಿ ತಾಳಿಕೋಟೆ, ಅರವಿಂದ್, ಬೇಬಿ ಅಕ್ಷರ ಮುಂತಾದವರಿದ್ದಾರೆ. ದೀಪು ಬೆನಕರಾಜ್ ಛಾಯಾಗ್ರಹಣ, ಸಂತೋಷ್ ಸಂಕಲನ, ವಿವೇಕ್ ಜಂಗ್ಲಿ ಸಂಗೀತವಿದೆ. ಸ್ಟಂಟ್ ಶಿವ ಗಣೇಶ್ ಚನ್ನಕೃಷ್ಣ ಸಾಹಸವಿದೆ.