- ಸೆಟ್ಟೇರಿದೆ ನಾಗೇಂದ್ರ ಪ್ರಸಾದ್ ನಿರ್ದೇಶನದ “ಪುನೀತ ನಿವಾಸ”
- ಪುನೀತ್ ರಾಜಕುಮಾರ ಅಭಿಮಾನಿಯ ಆದರ್ಶದ ಕತೆಯಿದು
- ತಂಡಕ್ಕೆ ಶುಭಕೋರಿದ ಅಶ್ವಿನಿ ಪುನೀತ್ ರಾಜಕುಮಾರ್
ಪುಟ್ಟಣ್ಣ ಕಣ್ಣಗಾಲ್ ರಂತಹ ಹಿರಿಯ, ಅನುಭವಿ ನಿರ್ದೇಶಕರ ಗರಡಿಯಲ್ಲಿ ಪಳಗಿದ ನಾಗೇಂದ್ರ ಪ್ರಸಾದ್ ರವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ “ಪುನೀತನಿವಾಸ” Puneeth Nivasa ಸೆಟ್ಟೇರಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಚಿತ್ರತಂಡಕ್ಕೆ ಶುಭಹಾರೈಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪುನೀತ್ ಅಭಿಮಾನಿಯ ಕಥೆಯಿದು!
ಪುನೀತ್ ಅವರ ಆದರ್ಶಗಳನ್ನೇ ಇಟ್ಟುಕೊಂಡು ಮಾಡುತ್ತಿರುವ ಈ ಚಿತ್ರ ಪುನೀತ್ ನ ಅಪ್ಪಟ ಅಭಿಮಾನಿಯೋರ್ವರ ಬದುಕಿನ ಕಥೆಯೂ ಹೌದು. ‘ಮಲ್ಲು’ ಎಂಬ ಹುಡುಗ ತಾನು ಸಿನಿಮಾ ಮಾಡಬೇಕೆಂಬ ಕನಸಿಟ್ಟುಕೊಂಡು ಕೂಡಿಟ್ಟಿದ್ದ ಹಣದಿಂದ ಬಡ ಹುಡುಗಿಯೊಬ್ಬಳಿಗೆ ಮನೆ ಕಟ್ಟಿಸಿಕೊಟ್ಟು ಅದಕ್ಕೆ ಪುನೀತನಿವಾಸ ಎಂಬ ಹೆಸರಿಡುತ್ತಾನೆ. ಇದರ ಸುತ್ತಮುತ್ತ ನಡೆಯುವ ಕಥೆಯೇ ಈ ಸಿನಿಮಾದ ಕಥಾಹಂದರವಾಗಿದೆ.
ಪಂಚಮಿ ಸಿನಿ ಕ್ರಿಯೇಶನ್ಸ್ ಮೂಲಕ ಮೋಹನ್ ಎಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಭಿಜಿತ್, ಮಾಸ್ಟರ್ ವಿಠಲ್, ಎಂ.ಎಸ್.ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ಲಕ್ಷ್ಮಿ ಭಟ್, ರೇಖಾ ದಾಸ್, ಗಣೇಶ್ ರಾವ್ ಕೇಸರಕರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಕೃಪಾಕರ್ ಸಂಗೀತ, ಬಾಲು ಛಾಯಾಗ್ರಹಣ, ಮುತ್ತುರಾಜ್ ಸಂಕಲನವಿದೆ. ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ನಿರ್ದೇಶಕರದ್ದು.