ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪ 2 ಚಿತ್ರ ತೆರೆಯ ಮೇಲೆ ಬಂದು ನಾಲ್ಕು ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ಮೊದಲ ದಿನವೇ 294 ಕೋಟಿ ಕೊಳ್ಳೆಹೊಡೆದ ಪುಷ್ಪ 2, ಮೂರು ದಿನಗಳಲ್ಲಿ ದಾಖಲೆಯ 620 ಕೋಟಿ ಕಲೆಕ್ಷನ್ ಹಾದಿ ಹಿಡಿದಿದೆ. ಅದರಲ್ಲೂ ವಿಶೇಷವೆಂದರೆ ತಮಿಳಿಗಿಂತಲೂ ಹಿಂದಿಯಲ್ಲಿ ಹೆಚ್ಚಿನ ಹಣ ಗಳಿಸಿದೆ.
2021ರಲ್ಲಿ ಬ್ಲಾಕ್ ಬಸ್ಟರ್ ಮೂವಿಯಾದ ಪುಷ್ಪ: ದಿ ರೈಸ್ ನ ಮುಂದುವರೆದ ಭಾಗವಾದ ಪುಷ್ಪ 2, ಹಲವು ದಾಖಲೆಗಳನ್ನು ಮುರಿದಿದೆ. ಇಲ್ಲಿಯವರೆಗಿನ ಭಾರತದ ಸಿನೆಮಾ ಇತಿಹಾಸದಲ್ಲೇ ಬಿಡುಗಡೆಯಾದ ದಿನವೇ ಹೆಚ್ಚು ಹಣ ಗಳಿಸಿರುವ ಚಿತ್ರವೆಂಬ ಖ್ಯಾತಿಯೂ ಇದಕ್ಕೆ ಬಂದಿದೆ. ಈ ಎಲ್ಲಾ ಸಾಧನೆಗಳಿಂದ ಖುಷಿಗೊಂಡ ಚಿತ್ರ ನಿರ್ಮಾಪಕರ ನವೀನ್ ಯೆರ್ನೇನಿ ಅಭಿಮಾನಿಗಳಿಗೆ ಟಿಕೆಟ್ ದರವನ್ನು ಇಳಿಸುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಇದರ ಹಿಂದೆ ಗಲ್ಲಾಪೆಟ್ಟಿಗೆಯನ್ನು ಇನ್ನಷ್ಟು ತುಂಬಿಸಿಕೊಳ್ಳುವ ಬ್ಯುಸಿನೆಸ್ ಟ್ಯಾಕ್ಟಿಕ್ ಇದೆ ಎಂಬ ಮಾತೂ ಕೂಡ ಕೇಳಿ ಬರ್ತಿದೆ. ಏನೇ ಆಗ್ಲಿ ಮೂವೀ ದಾಖಲೆಯ ಹಾದಿ ಹಿಡಿದಿದ್ದಂತೂ ಹೌದು.
ಸುಕುಮಾರ್ ನಿರ್ದೇಶನ ಈ ಚಿತ್ರಕ್ಕಿದೆ. ಐಟಂ ಸಾಂಗ್ ನ ಮೂಲಕ ಶ್ರೀಲೀಲಾ ಮಿಂಚಿದ್ದಾರೆ. ರಾವ್ ರಮೇಶ್, ಅನಸೂಯಾ, ಫಹಾದ್ ಫಾಸಿಲ್, ಸುನಿಲ್, ಜಗಪತಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.