- ಜೂ. 27ಕ್ಕೆ ತೆರೆಗೆ ಬರುತ್ತಿದ್ದಾನೆ “ರಾಜರತ್ನಾಕರ”
- ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡತೊಡಗಿದೆ
- ಅನುಭವಿ ಮತ್ತು ಹೊಸ ಕಲಾವಿದರ ವಿಭಿನ್ನ ಪ್ರಯತ್ನ ಈ “ರಾಜರತ್ನಾಕರ”
ಅಪರೂಪದ ಕತೆಯುಳ್ಳ ವಿಭಿನ್ನ ನಿರೂಪಣೆಯ ಸಿನಿಮಾ “ರಾಜರತ್ನಾಕರ” Rajarathnakara ಇದೇ ಜೂ. 27 ರಂದು ತೆರೆಗಪ್ಪಳಿಸಲಿದೆ. ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡತೊಡಗಿದೆ. ಅನುಭವಿ ಮತ್ತು ಹೊಸ ಕಲಾವಿದರ ವಿಭಿನ್ನ ಪ್ರಯತ್ನ ಈ “ರಾಜರತ್ನಾಕರ”
ಚೌಮುದ ಬ್ಯಾನರ್ ಅಡಿಯಲ್ಲಿ, ಜಯರಾಮ ಸಿ ಮಾಲೂರು Jayarama C Maluru ಅವರು ಮೊದಲ ಬಾರಿಗೆ ನಿರ್ಮಾಣ ಮಾಡಿದ ಈ ಸಿನಿಮಾವನ್ನು ನಿರ್ದೇಶಕ ವಿರೇಶ್ ಬೊಮ್ಮಸಾಗರ Veeresh Bommasagara ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ಚಂದನ್ ರಾಜ್ Chandan Raj ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅಪ್ಸರಾ Apsara ಸಾಥ್ ನೀಡಿದ್ದಾರೆ. ಚಿತ್ರದ ತಾರಾಬಳಗದಲ್ಲಿ ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು ಡಿಂಗ್ರಿ, ನರೇಶ್ ಸೇರಿದಂತೆ ಅನುಭವಿ ಕಲಾವಿದರಿದ್ದಾರೆ. ಹರ್ಷವರ್ದನ್ ರಾಜ್ ಅವರ ಸಂಗೀತವಿದೆ, ಸಿದ್ದು ಕಂಚನಳ್ಳಿ ಅವರ ಛಾಯಾಗ್ರಹಣವಿದೆ. ಸಂಕಲನದಲ್ಲಿ ಶಾಂತ್ ಕುಮಾರ್ ಜೊತೆಯಾಗಿದ್ದಾರೆ. ಟ್ರೈಲರ್ ಮೂಲಕ ಸಿನಿಮಾ ಸದ್ದು ಮಾಡಿದ್ದರಿಂದ ಸಿನಿಮಾದ ಬಗ್ಗೆಯೂ ಹಲವಾರು ನಿರೀಕ್ಷೆಗಳು ಮೂಡಿವೆ.