- ರಿಲೀಸ್ ಆಯ್ತು “ರಾಮನಗರ” ಸಿನಿಮಾ ಟೀಸರ್
- ರೈತರ ಕಥೆಯ ಸುತ್ತ ಹೆಣೆದಿರುವ ಚಿತ್ರ “ರಾಮನಗರ”
- ವಿಜಯ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿದೆ ಅಪರೂಪದ ವಿಷಯ ವಸ್ತುವಿನ ಚಿತ್ರ
ಚಂದನ್ ಸೂರ್ಯ Chandan Surya ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪ್ರಭು ಅರ್ಪಿಸುತ್ತಿರುವ ಅಪರೂಪದ ಕಥಾವಸ್ತುವಿನ ಚಿತ್ರ “ರಾಮನಗರ”ದ Ramanagara ಟೀಸರ್ ಇತ್ತೀಚೆಗೆ ಸಿರಿ ಮ್ಯೂಸಿಕ್ Siri Music ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದೆ. ವಿಜಯ್ ರಾಜ್ Vijay Raj ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪ್ರಭು ಸೂರ್ಯ Prabhu Surya ನಾಯಕನಾಗಿ ಮಿಂಚಿದ್ದಾರೆ. ಭರತ್ ಇಂಡಿಯಾ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಚಿತ್ರಕ್ಕಿದೆ. ಕೆವಿನ್ ಎಮ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ದೇಶಾಭಿಮಾನಿ ಯುವ ರೈತನ ಕಥೆ
ಹಳ್ಳಿಯಲ್ಲೇ ರೈತನ ಮಗನಾಗಿ ಹುಟ್ಟಿ, ಬೆಳೆದು ವಿದ್ಯಾವಂತನಾದ ಯುವಕನೊಬ್ಬ ನಗರದ ಕೆಲಸದೆಡೆಗೆ ಒಲವು ತೋರದೇ ವಿದ್ಯಾವಂತ, ದೇಶಾಭಿಮಾನಿ ರೈತನಾಗಿ, ಇತರ ಯುವಕರಿಗೂ ಮಾದರಿಯಾಗುವ ಕಥೆಯೇ ಈ ಸಿನಿಮಾದ ಜೀವಾಳ. ಹಾಗೇ ಹಳ್ಳಿ ಹುಡುಗ ರೈತನಾದಾಗ ಅನುಭವಿಸುವ ಸವಾಲುಗಳು, ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು, ಯುವ ರೈತರಿಗೆ ಮಾದರಿಯಾಗಬಲ್ಲ ಚಿತ್ರ ಇದಾಗಿದೆ. ಯುಗಾದಿ ಸಂದರ್ಭದಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.