ವಿಭಿನ್ನ ಕತೆಯ ಎಳೆ ಹೊಂದಿರುವ “ರಾವುತ” ಜ.31 ರಂದು ತೆರೆಗೆ

Date:

  • ವಿಭಿನ್ನ ಕತೆಯ ಎಳೆ ಹೊಂದಿರುವ “ರಾವುತ” ಜ.31 ರಂದು ತೆರೆಗೆ
  • ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಚಿತ್ರ
  • ಚಿತ್ರಕ್ಕೆ ನಟನೆಯ ಮೂಲಕ ಬಣ್ಣ ತುಂಬಿದ್ದಾರೆ ರಾಜ್ ಪ್ರವೀಣ್, ಭವಾನಿ ಪುರೋಹಿತ್

ಸಂಪೂರ್ಣ ಉತ್ತರ ಕರ್ನಾಟಕ Uttara Karnataka ಸೊಗಡಿನ, ಸಂಸ್ಕೃತಿಯ ದೃಶ್ಯ ಚಿತ್ರಣವನ್ನು ಹೊಂದಿರುವ, ವಿಭಿನ್ನ ಕಥಾ ಹಂದರವಿರುವ ಚಿತ್ರ “ರಾವುತ”. Ravutha Movie ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ ಈ ಚಿತ್ರವು ಒಂದು ವಿಭಿನ್ನ ಪ್ರಯತ್ನವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಜನವರಿ 31 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಸಿದ್ದು ವಜ್ರಪ್ಪ ನಿರ್ದೇಶನದ ಮೊದಲ ಚಿತ್ರವಾಗಿದೆ.

ಸಾವಿನ ನಂತರದ ಕುತೂಹಲ ಭರಿತ ಕಥೆ

ಈ ಸಿನಿಮಾ, ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ ಒಳಗೊಂಡಿದೆ. ಆದರೆ ಎಲ್ಲಾ ಸಿನಿಮಾಗಳಂತೆ ಕೇವಲ ಸಾಹಸ, ಪ್ರೀತಿ, ದ್ವೇಷ ಮುಂತಾದ ಸಮಾನ್ಯ ಸಂಗತಿಗಳಿಗೆ ಜೋತುಬೀಳದೇ ವಿಶಿಷ್ಟ ಕಥಾಹಂದರ ಹೊಂದಿದೆ. ಸಾವಿನ ನಂತರ ಏನಾಗುತ್ತೆ ಅನ್ನೋದನ್ನ ಕಥೆಯ ಸಾರವಾಗಿಸಿದ್ದಾರೆ ಕಥೆಗಾರ, ನಿರ್ದೇಶಕ ಸಿದ್ದುವಜ್ರಪ್ಪ.ಇದರ ಕ್ಲೈಮ್ಯಾಕ್ಸ್ ಸಾವಿನ ನಂತರದ ಪಯಣ ತಿಳಿಸುತ್ತದೆ ಎಂದು ಹೇಳಿದ್ದಾರೆ ನಿರ್ಮಾಪಕರು. ಸಣ್ಣ ಪ್ರೀಮಿಯರ್ ಶೋ ನಡೆದಿದ್ದು, ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಬಿಡುಗಡೆಗೊಳ್ಳುತ್ತಿದೆ. ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್ ಮಿಂಚಲಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...