- “ಸು ಫ್ರಮ್ ಸೋ” ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ರಿವೀಲ್
- ಚಿತ್ರತಂಡ ಸೆಟ್ ಹಾಕದೇ ನಿಜವಾದ ಮನೆಯನ್ನೇ ಆಯ್ಕೆ ಮಾಡಿಕೊಂಡು ಶೂಟಿಂಗ್ ಮಾಡಿರುವುದು ವಿಶೇಷ.
- ಯೂಟ್ಯೂಬ್ ಚಾನಲ್ ಒಂದರಲ್ಲಿ ರಿವೀಲ್ ಆಗಿದೆ ಫಿಲ್ಮ್ ಶೂಟಿಂಗ್ ನಡೆದ ಜಾಗ
ಹೊಸ ಹೊಸ ದಾಖಲೆಗಳಿಂದ ಸುದ್ದಿಯಲ್ಲಿರುವ, ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಓಡಿ ದಾಖಲೆ ಗಳಿಕೆ ಮಾಡುತ್ತಿರುವ “ಸು ಫ್ರಂ ಸೋ” Su from So ಚಿತ್ರದಲ್ಲಿ ಬರುವ ಮನೆ ಎಲ್ಲರ ಗಮನ ಸೆಳೆದಿತ್ತು. ಇದೆಲ್ಲಿ, ಯಾವ ಊರು? ಎಂದು ಎಲ್ಲರೂ ಕೇಳುವಂತಿತ್ತು ಆ ಮನೆಯ ದೃಶ್ಯ,. ಇದೀಗ “ದುರ್ಗ ಕಾಕ್ಯಾಪಡವು” ಹೆಸರಿನ ಯೂಟ್ಯೂಬ್ ಚಾನೆಲ್ ಈ ಮನೆಯ ರಿಯಲ್ ಚಿತ್ರವನ್ನು ವೈರಲ್ ಮಾಡಿದ್ದು “ಸು ಫ್ರಂ ಸೋ” ಚಿತ್ರ ನೋಡಿದ ಪ್ರೇಕ್ಷಕರು ಈ ಮನೆಯ ರಿಯಲ್ ಚಿತ್ರ ನೋಡಿ ಖುಷಿಪಡುತ್ತಿದ್ದಾರೆ.

ಶೂಟಿಂಗ್ ಗೆ ನಿಜವಾದ ಮನೆಯ ಆಯ್ಕೆ
ಸಾಮಾನ್ಯವಾಗಿ ಸಿನಿಮಾ ಶೂಟ್ ಮಾಡುವಾಗ ಸೆಟ್ಗಳ ನಿರ್ಮಾಣ ಮಾಡುತ್ತಾರೆ. ಸೆಟ್ನಲ್ಲಿಯೇ ಸಿನಿಮಾ ಶೂಟ್ ಮಾಡುತ್ತಾರೆ. ಆದರೆ, “ಸು ಫ್ರಂ ಸೋ” ಚಿತ್ರತಂಡ ನಿಜವಾದ ಮನೆಯನ್ನೇ ಆಯ್ಕೆ ಮಾಡಿಕೊಂಡು ಶೂಟಿಂಗ್ ಮಾಡಿರುವುದು ವಿಶೇಷ. “ಸು ಫ್ರಮ್ ಸೋ” ದ ಬಹುತೇಕ ಕಥೆ , ಕಥೆಯ ಪಾತ್ರ ಆಗಿರುವ ಅಶೋಕನ ಮನೆಯಲ್ಲಿ ಸಾಗುತ್ತದೆ. ಇದಕ್ಕಾಗಿ ಒಂದು ತಿಂಗಳು ಮನೆಯೊಂದನ್ನು ತೆಗೆದುಕೊಳ್ಳಲಾಗಿತ್ತು. ಮನೆಯ ಮಾಲೀಕರು ಈ ಮನೆಯನ್ನು ಶೂಟಿಂಗ್ಗೆ ನೀಡಿದ್ದರು. ಚಿತ್ರತಂಡ ಸಂಪೂರ್ಣ ಮನೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಂಡಿತ್ತು. ಇದೀಗ ವೈರಲ್ಲಾಗಿರುವ ಈ ವಿಡಿಯೋ ಈ ಮನೆಯ ರಿಯಲ್ ದೃಶ್ಯಗಳನ್ನು ತೋರಿಸಿದೆ.

ಮೆಹಂದಿ ಕಾರ್ಯಕ್ರಮ, ಡ್ಯಾಂಕ್ಸ್ ಆ್ಯಂಥಮ್ ಹಾಡಿನ ಶೂಟ್, ಬಾವನ ಎಂಟ್ರಿ ಶೂಟ್ ನಡೆದ ಸ್ಥಳವನ್ನು ವಿಡಿಯೋದಲ್ಲಿ ದುರ್ಗಪ್ರಸಾದ್ ಎನ್ನುವವರು ತೋರಿಸಿದ್ದಾರೆ. ಈ ವಿಡಿಯೋ “ಸು ಫ್ರಂ ಸೋ” ಲೋಕೇಶನ್ ಚಿತ್ರೀಕರಣದ ನಂತರ ಹೇಗೆ ಕಾಣುತ್ತಿದೆ ಎನ್ನುವುದುನ್ನು “ಸು ಫ್ರಂ ಸೋ” ಚಿತ್ರದ ಅಭಿಮಾನಿಗಳಿಗೆ ತೋರಿಸಿದೆ.


