- ಕೊನೆಗೂ “45” ಚಿತ್ರದ ರಿಲೀಸ್ ಡೇಟ್ ಫಿಕ್ಸ್
- ಹೊಸ ತಂತ್ರಜ್ಞಾನದೊಂದಿಗೆ ಅಬ್ಬರಿಸಲಿದೆ ಬಹುತಾರಾಗಣದ ಈ ಚಿತ್ರ
- ಡಿಸೆಂಬರ್ 25 ರಂದು ಬಹುಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಈ ವರ್ಷದ ಬಹು ನಿರೀಕ್ಷಿತ ಚಿತ್ರ “45” Fourty five ಡಿಸೆಂಬರ್ 25 ರಂದು ಬಹುಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಶಿವರಾಜ್‌ಕುಮಾರ್ Shivaraj Kumar, ಉಪೇಂದ್ರ Upendra ಮತ್ತು ರಾಜ್ ಬಿ ಶೆಟ್ಟಿ Raj B Shetty ಸೇರಿದಂತೆ ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದ ರಿಲೀಸ್ ಡೇಟ್ ಕುರಿತು ಭಾರೀ ನಿರೀಕ್ಷೆ ಇತ್ತು. ಇದೀಗ ಆ ನಿರೀಕ್ಷೆಗೆ ತೆರೆ ಬಿದ್ದಿದೆ. ಆರಂಭದಲ್ಲಿ ಈ ಚಿತ್ರವನ್ನು ಆಗಸ್ಟ್ 15 ರಂದು ತೆರೆಗೆ ತರಲು ನಿರ್ಧರಿಸಲಾಗಿತ್ತು. ಆದರೆ ಚಿತ್ರದ ಕೆಲಸಗಳು ಜಾಸ್ತಿಯಾದದ್ದರಿಂದ VFX ನಂತಹ ತಾಂತ್ರಿಕ ಅಳವಡಿಕೆಯ ಕಾರಣದಿಂದ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂಡೂಡಿತ್ತು.
“45″ ಚಿತ್ರವು ಅರ್ಜುನ್ ಜನ್ಯ Arjun Janya ಅವರ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಸೂರಜ್ ಪ್ರೊಡಕ್ಷನ್ಸ್ Suraj Productions ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಲಿವುಡ್ ದರ್ಜೆಯ ದೃಶ್ಯ ಪರಿಣಾಮಗಳಿಗೆ ಹೆಸರುವಾಸಿಯಾದ ಕೆನಡಾದ MARZ ಸ್ಟುಡಿಯೋ (ಮಾನ್ಸ್ಟರ್ಸ್ ಏಲಿಯೆನ್ಸ್ ರೋಬೋಟ್ಸ್ ಜೋಂಬಿಸ್) ಚಿತ್ರದ ಗಾಫಿಕ್ಸ್ ನಿರ್ವಹಿಸಿದೆ ಎಂದು ಚಿತ್ರತಂಡ ಹೇಳಿದೆ. ಕೌಸ್ತುಭ ಮಣಿ Kaustubha Mani ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸತ್ಯ ಹೆಗ್ಡೆ ಈ ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನದಲ್ಲಿ, ಸಹಕರಿಸಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರದ ತಾಂತ್ರಿಕ ಕೆಲಸಗಳನ್ನು ಮಾಡಿರುವುದರಿಂದ ತಾಂತ್ರಿಕವಾಗಿಯೂ ಸಿನಿಮಾ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಚಿತ್ರದ ತಾರಾಗಣದಲ್ಲಿ ಇನ್ನೂ ಯಾರಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.