- ಐತಿಹಾಸಿಕ ಸಿನಿಮಾದಲ್ಲಿ ಅಬ್ಬರಿಸಲಿರುವ ರಿಷಬ್ : ಅಭಿಮಾನಿಗಳಿಗೆ ರಿಷಬ್ ನೀಡಿದ ಗುಡ್ ನ್ಯೂಸ್ ಏನು?
- ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಪೋಸ್ಟರ್‌ವೊಂದನ್ನು ರಿಷಬ್ ಶೇರ್ ಮಾಡಿದ್ದಾರೆ
- 18 ನೇ ಶತಮಾನದ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ.
ಕಾಂತಾರ ಪ್ರೀಕ್ವೆಲ್, ಅಕ್ಟೋಬರ್ ನಲ್ಲಿ ಬಿಡುಗಡೆಯಾಗುವ ಸುದ್ದಿ ನೀಡಿದ ಬೆನ್ನಲ್ಲೇ ಇದೀಗ ಖ್ಯಾತ ನಟ ರಿಷಬ್ ಶೆಟ್ಟಿ Rishab Shetty ಅವರು ತಮ್ಮ ಅಭಿಮಾನಿಗಳಿಗೆ ಹೊಸತೊಂದು ಸುದ್ದಿ ನೀಡಿದ್ದಾರೆ. ಹೌದು ರಿಷಬ್ ಶೆಟ್ಟಿ ಅವರು ತಾನೊಂದು ಹೊಸ ಸಿನಿಮಾದಲ್ಲಿ ನಟಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅವರು ಅನೌನ್ಸ್ ಮಾಡಿದ್ದಾರೆ. ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಪೋಸ್ಟರ್‌ವೊಂದನ್ನು ರಿಷಬ್ ಶೇರ್ ಮಾಡಿದ್ದಾರೆ. ಈ ಹಿಂದೆ ಛತ್ರಪತಿ ಶಿವಾಜಿ Chathrapathi Shivaji ಹಾಗೂ ಶ್ರೀಕೃಷ್ಣ ದೇವರಾಯರ ಬಯೋಪಿಕ್‌ನಲ್ಲಿ Shri Krishnadevaraya Biopic ನಟಿಸುವುದಾಗಿ ರಿಷಬ್ ಘೋಷಿಸಿದ್ದರು. ಈಗ ಅವರು ನಟಿಸುವ ಚಿತ್ರವನ್ನು ನಾಗ ವಂಶಿ Nagavamshi ಅವರ ಸಿತಾರಾ ಎಂಟರ್ಟೈನ್ಮೆಂಟ್ಸ್ Sithara Entertainers ಕನ್ನಡ-ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿದೆಯಂತೆ.
ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ
ಅಂದ ಹಾಗೆ ಈ ಚಿತ್ರವನ್ನು ಯುವ ಚಲನಚಿತ್ರ ನಿರ್ಮಾಪಕ ಅಶ್ವಿನ್ ಗಂಗರಾಜು Ashwin Gangarju ನಿರ್ದೇಶಿಸಲಿದ್ದಾರೆ. 18 ನೇ ಶತಮಾನದ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ. ಈ ಚಿತ್ರವನ್ನು ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗುತ್ತಿದ್ದು, ಹಿಂದಿ, ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿಯೂ ಬಿಡುಗಡೆಯಾಗಲಿದೆಯಂತೆ ಎಂದು ರಿಷಬ್ ಘೋಷಿಸಿರುವುದು ಅವರ ಅಭಿಮಾನಿಗಳಿಗೊಂದು ಗುಡ್ ನ್ಯೂಸ್.
ಐತಿಹಾಸಿಕ ಸಿನಿಮಾ
ರಿಷಬ್ ಹಂಚಿಕೊಂಡಿರುವ ಪೋಸ್ಟರ್ ನಲ್ಲಿ ಯುದ್ದದ ದೃಶ್ಯವಿದೆ. ಐತಿಹಾಸಿಕ ಸಿನಿಮಾ ಇದು ಎನ್ನುವುದು ಗೊತ್ತಾಗುತ್ತದೆ. ಪೋಸ್ಟರ್ ನಲ್ಲಿ ಯೋಧನಿದ್ದಾನೆ. ಫಿರಂಗಿ, ಗುಂಡು ಒಟ್ಟಾರೆ ಯುದ್ದ ಭೂಮಿಯ ವಿವಿಧ ಅಂಶಗಳು ಪೋಸ್ಟರ್ ನಲ್ಲಿ ಗಮನಸೆಳೆಯುತ್ತಿದೆ. ಹಾಗಾಗಿ ಇದು ಯುದ್ಧ ಮತ್ತು ರಣರಂಗದ ಕತೆಯುಳ್ಳ ಚಿತ್ರವಾಗಿರಬಹುದು ಎನ್ನುವ ಕುತೂಹಲವೂ ಮೂಡುತ್ತದೆ.