- ತೆರೆಗಪ್ಪಳಿಸಲು ರೆಡಿಯಾಯ್ತು ಸೈಕಾಲಜಿಕಲ್ ಸಸ್ಪೆನ್ಸ್ “ರೂಮ್ ಬಾಯ್”
- ಪ್ರತಿಭಾನ್ವಿತರ ಪ್ರಯೋಗಾತ್ಮಕ ಮೂವಿ ಸೆಪ್ಟೆಂಬರ್ 12ಕ್ಕೆ ರಿಲೀಸ್
- ವಿಭಿನ್ನ ಕತೆಯ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ
ಸೈಕಾಲಜಿಕಲ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ‘ರೂಮ್ ಬಾಯ್’(Roomboy) ಸಿನಿಮಾ ಸೆಪ್ಟೆಂಬರ್ 12ಕ್ಕೆ(september12) ತೆರೆಗೆ ಎಂಟ್ರಿ ಕೊಡಲಿದೆ. ಈಗಾಗಲೇ ರೂಮ್ ಬಾಯ್’ ಸಿನಿಮಾದ ಟ್ರೈಲರ್ ರಿಲೀಸಾಗಿದ್ದು ಒಂದಷ್ಟು ಪ್ರತಿಭಾನ್ವಿತರ ಪರಿಶ್ರಮದಿಂದ ಮೂಡಿದ ಎಮೋಷನಲ್ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ರವಿ ನಾಗಡದಿನ್ನಿ(Ravi nagadadinni) ಆಕ್ಷನ್ ಕಟ್ ಹೇಳಿದ್ದು, ಲಿಖಿತ್ ಸೂರ್ಯ(Likhithsoorya) ಚಿತ್ರ ನಿರ್ಮಾಣ ಮಾಡಿ, ನಾಯಕ ನಟನಾಗಿಯೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅವರಿಗೆ ಜೋಡಿಯಾಗಿ ರಕ್ಷಾ(Raksha) ಸಾಥ್ ನೀಡಿದ್ದಾರೆ.
ಫ್ಯಾಮಿಲಿಗೆ ಕನೆಕ್ಟ್ ಆಗೋ ಮೂವಿ:
“ರೂಮ್ ಬಾಯ್” ಎಕ್ಸ್ ಪಿರಿಮೆಂಟಲ್ ಸಿನಿಮಾ ಆಗಿದ್ದು ಪ್ರತಿಭಾನ್ವಿತ ತಂಡದ ಹೊಸ ಪ್ರಯತ್ನವಾಗಿದೆ. ಎಮೋಷನಲ್ ಶೇಡ್ ಜಾಸ್ತಿಯಾಗಿರುವ ಈ ಚಿತ್ರದಲ್ಲಿ ಕುಟುಂಬದ ಸದಸ್ಯರಿಗೆಲ್ಲಾ ಇಷ್ಟವಾಗುವ ಅಂಶಗಳಿವೆ. ಸೈಕಾಲಜಿಕಲ್ ಅಂಶಗಳು ಫ್ಯಾಮಿಲಿಗೆ ಕನೆಕ್ಟ್ ಆಗುತ್ತವೆ. ಮನೋರಂಜನೆ ಕೂಡ ಬೇಕಾದಷ್ಟಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಚಿತ್ರದಲ್ಲಿ ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಒಂದಷ್ಟು ಹೊಸ ಪ್ರತಿಭೆಗಳು ಬಣ್ಣ ಹಚ್ಚಿದ್ದಾರೆ. ಸಿನಿಮಾಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದ್ದು, ಧನಪಾಲ್ ನಾಯಕ್ ಛಾಯಾಗ್ರಹಣವಿದೆ. ಕಿರಣ ಕುಮಾರ್ ಜಿ ಸಂಕಲನವಿದೆ. ಕ್ರಿಯೇಟಿವ್ ಹೆಡ್ ಆಗಿ ವಿಜಯ್ ಭರಮಸಾಗರ್ ಸಾಥ್ ನೀಡಿದ್ದು, ಐ ಕಾನ್ ಪ್ರೊಡಕ್ಷನ್ (Icon production) ಅಡಿ ಲಿಖಿತ್ ಸೂರ್ಯ ಸಿನಿಮಾಗೆ ಹಣ ಹಾಕಿದ್ದಾರೆ.