- ರಾಯಲ್ ಆಗಿ ಜ.24 ರಂದು ತೆರೆಗೆ ಬರ್ತಿದೆ ದಿನಕರ್ ತೂಗುದೀಪ ನಿರ್ದೇಶನದ “ರಾಯಲ್”
- ನಾಯಕ, ನಾಯಕಿಯರಾಗಿ ಮಿಂಚಿದ್ದಾರೆ ವಿರಾಟ್, ಸಂಜನಾ
- ಈಗಾಗಲೇ ಸಂಚಲನ ಮೂಡಿಸಿವೆ ಚಿತ್ರದ ಹಾಡುಗಳು
ಉದಯೋನ್ಮುಖ ಪ್ರತಿಭೆ ವಿರಾಟ್ ಅಭಿನಯದ, ಜಯಣ್ಣ ಫಿಲಂಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ತೂಗುದೀಪ ದಿನಕರ್ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ “ರಾಯಲ್” Royal Movie ಚಿತ್ರ ಜನವರಿ 24 ರಂದು ತೆರೆಗೆ ಬರಲು ಸಜ್ಜಾಗಿದೆ.

ಜನಮೆಚ್ಚುಗೆಗೆ ಪಾತ್ರವಾಗಿವೆ ಚಿತ್ರದ ಹಾಡುಗಳು
ಸರಿಗಮ ಕನ್ನಡ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಚಾನಲ್ ನಲ್ಲಿ ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ “ನಾನೇ ಕೃಷ್ಣ..ನಾನೇ ಶಾಮ್” ಗೀತೆಗೆ ಸಂಜಿತ್ ಹೆಗ್ಡೆ ಹಾಗೂ ಎಂ ಎಂ ಮನವಿ ಧ್ವನಿಯಾಗಿದ್ದರು. ಚರಣ್ ರಾಜ್ ಎಂ ಆರ್ ಸಂಗೀತ ನಿರ್ದೇಶನವಿತ್ತು.
‘ವಿರಾಟ್’ನ ರಾಯಲ್ ಲುಕ್ ನೋಡಬೇಕಿದೆ
ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರ ಪ್ರಪಂಚಕ್ಕೆ ಪಾದಾರಪಣೆ ಮಾಡಿದ ಉದಯೋನ್ಮುಖ ನಟ ವಿರಾಟ್ Virat ಅವರಿಗಿದು ಎರಡನೇ ಚಿತ್ರ. ಸಂಜನಾ ಆನಂದ್ Sanjana Andand ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಅಭಿಲಾಷ್ ತಾರಾಬಳಗದಲ್ಲಿದ್ದಾರೆ. ಸಂಕೇತ್ ಮೈಸ್ ಅವರ ಛಾಯಾಗ್ರಹಣವಿದೆ. ಕತೆಗಾರ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಜ. 24 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ತಮ್ಮ(ದಿನಕರ್ ತೂಗುದೀಪ್) ನಿರ್ದೇಶನದ ಚಿತ್ರಕ್ಕೆ ಅಣ್ಣ ದರ್ಶನ್ ಸಪೋರ್ಟ್ ಇರತ್ತಾ, ಬಾಕ್ಸ್ ಆಫೀಸ್ ನಲ್ಲಿ ಹೇಗೆ ಕಮಾಲ್ ಮಾಡಲಿದೆ ಈ ಚಿತ್ರ ಕಾದು ನೋಡಬೇಕಿದೆ.