ಸೆ. 5 ಕ್ಕೆ ಸಖತ್ ಥ್ರಿಲ್ಲರ್ ಮೂವಿ “ರುಧಿರಂ” ತೆರೆಗೆ

Date:

  • ಸೆ. 5 ಕ್ಕೆ ಸಖತ್ ಥ್ರಿಲ್ಲರ್ ಮೂವಿ “ರುಧಿರಂ” ತೆರೆಗೆ
  • ಟ್ರೈಲರ್ ಮೂಲಕ ಸದ್ದು ಮಾಡಿ ಕುತೂಹಲ ಮೂಡಿಸಿದೆ ಡಿಫರೆಂಟ್ ಕಥಾನಕ
  • ನಿಗೂಢತೆಯೇ ಸಿನಿಮಾದ ಮೂಲ ಎಲಿಮೆಂಟ್ ಆಗಿದ್ದು ನಿಗೂಢ ಜಾಗಗಳಲ್ಲಿ ಚಿತ್ರೀಕರಿಸಲಾಗಿದೆ.

“ರುಧಿರಂ” Rudhiram ಕನ್ನಡ ಚಿತ್ರದ ಟ್ರೈಲರ್ ರಿಲೀಸ್ ಗೊಂಡು ಎಲ್ಲೆಡೆ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗಿದ್ದು ಸೆ. 5 ರಂದು “ರುಧಿರಂ” ಕರ್ನಾಟಕದಲ್ಲಿ ತೆರೆಗಪ್ಪಳಿಸಲಿದೆ. ಥ್ರಿಲ್ಲರ್, ಕ್ರೈಂ ಕಥಾನಕ ಹೊಂದಿರುವ “ರುಧಿರಂ” ಚಿತ್ರದಲ್ಲಿ ಕನ್ನಡದ ಖ್ಯಾತ ನಟ ರಾಜ್ ಬಿ ಶೆಟ್ಟಿ Raj B Shetty ಕಾಡೊಂದರ ನಡುವೆ ಇರುವ ಎಸ್ಟೇಟ್ ನಲ್ಲಿ ಕೆಲಸ ಮಾಡುವ ವೈದ್ಯರಾಗಿ ಬಣ್ಣ ಹಚ್ಚಿದ್ದು ಟ್ರೈಲರ್ ನಲ್ಲಿ ರಾಜ್ ನಟನೆ ವಿಭಿನ್ನ ಶೇಡ್ ನಲ್ಲಿ ಮೂಡಿಬಂದಿದೆ. ನಿಗೂಢತೆಯೇ ಸಿನಿಮಾದ ಮೂಲ ಎಲಿಮೆಂಟ್ ಆಗಿದ್ದು ದೃಶ್ಯಗಳನ್ನೂ ಆ ನಿಗೂಢ ಜಾಗಗಳಲ್ಲಿ ಚಿತ್ರೀಕರಿಸಲಾಗಿದೆ.

ಕುತೂಹಲ ಕೆರಳಿಸಿದೆ ದ್ವೇಷದ ಕತೆ

ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟಿ ಅಪರ್ಣಾ ಬಾಲಮುರಳಿ Aparna Balamurali ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಅಪರ್ಣಾ ಬಾಲಮುರಳಿ ಹಾಗೂ ರಾಜ್ ಬಿ ಶೆಟ್ಟಿ ನಡುವೆ ನಡೆವ ದ್ವೇಷದ ಕತೆಯೇ ಈ ಸಿನಿಮಾ ಇರಬಹುದೆಂಬ ಅನುಮಾನ ಟ್ರೈಲರ್ ನಿಂದ ಮೂಡುತ್ತದೆ. ಜೊತೆಗೆ ಒಂದು ನಾಯಿ ಕೂಡ ಚಿತ್ರದಲ್ಲಿದ್ದು ಕುತೂಹಲಕ್ಕೆ ಇನ್ನೊಂದಷ್ಟು ಟ್ವಿಸ್ಟ್ ನೀಡುವಂತಿದೆ. ಜಿಶೋ ಲೋನ್ ಆಂಟನಿ Jisho Lone Antany ಈ ಸಿನಿಮಾವನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ವಿ.ಎಸ್. ಲಾಲನ್ V. S. Lalan ನಿರ್ಮಾಣ ಮಾಡಿದ್ದಾರೆ.

ಫೋರ್ ಮ್ಯೂಸಿಕ್ ಸಂಸ್ಥೆ ಈ ಸಿನಿಮಾಕ್ಕೆ ಸಂಗೀತ ನೀಡಿದೆ. ಸಿನಿಮಾದ ಕ್ಯಾಮೆರಾ ಕೆಲಸ ಸಜದ್ ಕಾಕು ಮಾಡಿದ್ದಾರೆ. ಕೆಲ ಅತ್ಯುತ್ತಮ ತಂತ್ರಜ್ಞರು ಸೇರಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದು ಸಿನಿಮಾ ಅದ್ಬುತವಾಗಿ ತೆರೆಯ ಮೇಲೆ ಮೂಡಿಬರುವ ನಿರೀಕ್ಷೆ ಇದೆ. ಮಲಯಾಲಂ ಭಾಷೆಯಲ್ಲಿ ಈ ಹಿಂದೆ “ರುಧಿರಂ” ಸಿನಿಮಾ ಬಿಡುಗಡೆಯಾಗಿತ್ತು, ಇದೀಗ ಕನ್ನಡದ ಪ್ರೇಕ್ಷಕರಿಗೂ ಥ್ರಿಲ್ಲಿಂಗ್ ಅನುಭವ ಕೊಡಲು “ರುಧಿರಂ” ಟೀಂ ಸಿದ್ದಗೊಂಡಿದ್ದು ಕನ್ನಡದಲ್ಲೂ “ರುಧಿರಂ” ಸದ್ದು ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ದ“ಸೀಟ್ ಎಡ್ಜ್”ಚಿತ್ರದ ವ್ಲಾಗ್-1 ಲೂಪ್

ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ದ“ಸೀಟ್ ಎಡ್ಜ್”ಚಿತ್ರದ ವ್ಲಾಗ್-1 ಲೂಪ್ ಕಾಮಿಡಿ -ಹಾರರ್-ಥ್ರಿಲ್ಲರ್ ಮೂವಿ “ಸೀಟ್...

“ನೆತ್ತೆರೆಕೆರೆ” ಕೊಟ್ಟ ವಿಭಿನ್ನ ಫೀಲ್ ಗೆ ತುಳು ಪ್ರೇಕ್ಷಕರು ಫಿದಾ

“ನೆತ್ತೆರೆಕೆರೆ” ಕೊಟ್ಟ ವಿಭಿನ್ನ ಫೀಲ್ ಗೆ ತುಳು ಪ್ರೇಕ್ಷಕರು ಫಿದಾ ಡಿಫರೆಂಟ್ ಕತೆಯ...

ಕೊನೆಗೂ ಫಿಕ್ಸ್ ಆಯ್ತು ಕನ್ನಡದ ಬಿಗ್ ಬಾಸ್ ಸೀಸನ್ 12 ರ ಡೇಟ್

ಕೊನೆಗೂ ಫಿಕ್ಸ್ ಆಯ್ತು ಕನ್ನಡದ ಬಿಗ್ ಬಾಸ್ ಸೀಸನ್ 12 ರ...

ಅಂತರಾಷ್ಟ್ರೀಯ ಅಂಗಳದಲ್ಲಿ ಸದ್ದು ಮಾಡಿದ ತುಳು ಚಿತ್ರ “ಪಿದಾಯಿ” ಸೆ.12 ರಂದು ರಿಲೀಸ್

ಅಂತರಾಷ್ಟ್ರೀಯ ಅಂಗಳದಲ್ಲಿ ಸದ್ದು ಮಾಡಿದ ತುಳು ಚಿತ್ರ “ಪಿದಾಯಿ” ಸೆ.12 ರಂದು...