- ಆಧ್ಯಾತ್ಮಿಕತೆಯ ಎತ್ತರಕ್ಕೆ ಏರಿಸಲಿದೆ “ಸಹ್ಯಾದ್ರಿ”ಯ ತಪ್ಪಲು
- ಬಹುಭಾಷೆಯಲ್ಲಿ ಸೌಂಡ್ ಮಾಡಲಿರುವ “ಸಹ್ಯಾದ್ರಿ”ಯ ಶೂಟಿಂಗ್ ಮುಕ್ತಾಯ
- ಶೀಘ್ರದಲ್ಲೇ ರಿಲೀಲ್ ಡೇಟ್ ಅನೌನ್ಸ್
ಹೊಸ ಆಧ್ಯಾತ್ಮಿಕ ಥ್ರಿಲ್ಲರ್ ಚಿತ್ರ “ಸಹ್ಯಾದ್ರಿ” Sahyadri ತನ್ನ ಶೂಟಿಂಗ್ ಪೂರ್ಣಗೊಳಿಸಿದ್ದು ಪೊಡಕ್ಷನ್ ವರ್ಕ್ ಗಳತ್ತ ದೃಷ್ಟಿ ನೆಟ್ಟಿದೆ. ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಅಂಶಗಳು ಮೇಳೈಸಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆರ ರೋಹಿತ್ Ara Rohith ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ನಟನಾಗಿ ಬಣ್ಣ ಹಚ್ಚಿದ್ದಾರೆ.
“’ಸಹ್ಯಾದ್ರಿ” ಚಿತ್ರವು ಅಸಾಧಾರಣವಾಗಿ ಮೆದುಳಿನಲ್ಲಿ ಹೆಚ್ಚಿನ ಸಂಖ್ಯೆಯ ನರಕೋಶಗಳನ್ನು ಹೊಂದುತ್ತಾ ಅಕಾಲಿಕವಾಗಿ ಜನಿಸಿದ ಮಗುವಿನ ಕಥೆಯನ್ನು ಹೇಳುತ್ತದೆ. ಆ ಮಗು ಬೆಳೆದಂತೆ, ಅಪಾರ ಶಕ್ತಿಗಳನ್ನು ತಡೆದುಕೊಳ್ಳುವ ಮತ್ತು ನಿಯಂತ್ರಿಸುವ ಸಾಮರ್ಥ್ಯವಿರುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತದೆ. ಚಿತ್ರವು ಆಧ್ಯಾತ್ಮಿಕತೆ ಮತ್ತು ಥ್ರಿಲ್ಲರ್ ಸಂಯೋಜನೆಯಾಗಿದೆ.
ಬಹುಭಾಷೆಯಲ್ಲಿ ಮಿಂಚಲಿರುವ ಚಿತ್ರ
ಚಿತ್ರವನ್ನು ಮೊದಲಿಗೆ ಕನ್ನಡದಲ್ಲಿ ಚಿತ್ರೀಕರಿಸಲಾಗುವುದು. ನಂತರ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್‌ಗೆ ಡಬ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಪಶ್ಚಿಮ ಘಟ್ಟಗಳ ರಮಣೀಯ ಪ್ರದೇಶಗಳಲ್ಲಿ, ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. 2026ರ ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಎಆರ್ ಫಿಲ್ಮ್ಸ್ AR Films ಬ್ಯಾನರ್ ಅಡಿಯಲ್ಲಿ ರೇಣುಕಾ ಪಿಎನ್ Renuka PN ಅವರ ಬೆಂಬಲದೊಂದಿಗೆ ಸಹ್ಯಾದ್ರಿ ಚಿತ್ರಕ್ಕೆ ಛಾಯಾಗ್ರಾಹಕ ವಿಲಿಯಂ ಡೇವಿಡ್ (ವಿಕ್ರಾಂತ್ ರೋಣ) ಅವರ ಅಡಿಯಲ್ಲಿ ಕೆಲಸ ಮಾಡಿರುವ ವಿನೋದ್ ಲೋಕಣ್ಣನವರ್ ಛಾಯಾಗ್ರಹಣವಿದೆ. ನವನಾಥ್ ವಾಸುದೇವ್ ಅವರ ಸಂಗೀತ ಸಂಯೋಜನೆ, ಮಾದೇಶ್ ರಾಜ್ ಸಂಕಲನ ಚಿತ್ರಕ್ಕಿದೆ.