- ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ದ“ಸೀಟ್ ಎಡ್ಜ್”ಚಿತ್ರದ ವ್ಲಾಗ್-1 ಲೂಪ್
- ಕಾಮಿಡಿ -ಹಾರರ್-ಥ್ರಿಲ್ಲರ್ ಮೂವಿ “ಸೀಟ್ ಎಡ್ಜ್”
- ಶೀಘ್ರದಲ್ಲಿ ರಿಲೀಸಾಗಲಿದೆ ವಿಭಿನ್ನ ಕತೆಯ ಸಿನಿಮಾ
ಕಾಮಿಡಿ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿರುವ “ಸೀಟ್ ಎಡ್ಜ್” Seat Edge ಚಿತ್ರದ ವ್ಲಾಗ್-1 ದಿ ಲೂಪ್ Vlog 1 the loop ಬಿಡುಗಡೆಯಾಗಿದ್ದು, ಚಿತ್ರದ ಕುರಿತು ಸಖತ್ ಕುತೂಹಲ ಮೂಡಿಸಿದೆ. ವ್ಲಾಗ್ 1 ರಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ಅಂಶಗಳಿದ್ದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಚೇತನ್ ಶೆಟ್ಟಿ Chethan Shetty ನಿರ್ದೇಶನವಿರುವ, ಈ ಚಿತ್ರದಲ್ಲಿ ಸಿದ್ಧು ಮೂಲಿಮನಿ Siddu Moolimani, ಯುಟ್ಯೂಬ್ ವ್ಲಾಗರ್ ಆಗಿ ಬಣ್ಣ ಹಚ್ಚಿದ್ದಾರೆ. ಅವರಿಗೆ ನಾಯಕಿಯಾಗಿ ಸಾಥ್ ನೀಡಿರುವ ರವೀಕ್ಷಾ ಶೆಟ್ಟಿ, Raveeksha Shetty ಮಧ್ಯಮ ವರ್ಗದ ಕಾಲೇಜ್ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ. ಎನ್. ಆರ್. ಸಿನಿಮಾ ಪ್ರೊಡಕ್ಷನ್ಸ್ N R Cinema Productions ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ Giridhara T Vasanthapura ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಮಾಸ್ ಆಡಿಯನ್ಸ್ ಇಷ್ಟ ಪಡುವ ಕತೆ
ಸದ್ಯ ತನ್ನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ “ಸೀಟ್ ಎಡ್ಜ್” ಚಿತ್ರತಂಡ. ಅಂದ ಹಾಗೆ ಚಿತ್ರದಲ್ಲಿ ಒಳ್ಳೆಯ ಕಥೆ, ಹಾಡು, ಡ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್, ಸಸ್ಪೆನ್ಸ್-ಥ್ರಿಲ್ಲರ್ ಸೇರಿ ಹಲವು ಪ್ರಧಾನ ಅಂಶಗಳಿವೆ. ಅತಿಹೆಚ್ಚು ವೀವ್ಸ್ ಪಡೆಯಲು, ಜನಪ್ರಿಯರಾಗಲು ಯುಟ್ಯೂಬರ್ಸ್ ಮತ್ತು ವ್ಲಾಗರ್ಸ್ ಏನೇನು ಸಾಹಸಗಳನ್ನು ಮಾಡುತ್ತಾರೆ ಎಂಬ ಎಳೆಯನ್ನಿಡಿದುಕೊಂಡು ಸಿನಿಮಾ ಮಾಡಲಾಗಿದೆ. ಎಲ್ಲಾ ಥರಹದ ಆಡಿಯನ್ಸ್ಗೂ ಕನೆಕ್ಟ್ ಆಗುವಂಥ ಸಿನಿಮಾ ಇದಾಗಿದ್ದು. ನಮಗೆ ಗೊತ್ತಿಲ್ಲದ ವಿಷಯದಲ್ಲಿ ದುಸ್ಸಾಹಸಕ್ಕೆ ಕೈಹಾಕಿದರೆ, ಏನೇನು ಆಗಬಹುದು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಹೇಳಿದ್ದೇವೆ ಎನ್ನುವುದು ಚಿತ್ರತಂಡದ ಭರವಸೆ.
ಚಿತ್ರದ ತಾರಾಗಣದಲ್ಲಿ ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕದಲ್ಲಿ ಆಕಾಶ್ ಪರ್ವ, ಛಾಯಾಗ್ರಹಣದಲ್ಲಿ ದೀಪಕ್ ಕುಮಾರ್ ಜೆ. ಕೆ ಜೊತೆಯಾಗಿದ್ದಾರೆ. ಸದ್ಯ ವ್ಲಾಗ್ 1 ವಿಡಿಯೋ ಮೂಲಕ ಸದ್ದು ಮಾಡುತ್ತಿರುವ “ಸೀಟ್ ಎಡ್ಜ್” ಶೀಘ್ರದಲ್ಲಿಯೇ ತೆರೆಗಪ್ಪಳಿಸಲಿದೆ.