- ತಿಳಿಹಾಸ್ಯದೊಂದಿಗೆ ಮನಸೆಳೆಯುತ್ತಿದೆ “ಶಭಾಷ್ ಬಡ್ಡಿ ಮಗ್ನೆ” ಟ್ರೈಲರ್
- ಫೆ. 28 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಪ್ರಮೋದ್ ಶೆಟ್ಟಿ ನಾಯಕತ್ವದ ಸಿನಿಮಾ
- ಬಿ.ಎಸ್. ರಾಜಶೇಖರ್ ನಿರ್ದೇಶಿಸಿರುವ, ಚೈತ್ರಾ ಪ್ರಕಾಶ್ ನಿರ್ಮಾಣದ ಚಿತ್ರ “ಶಭಾಷ್ ಬಡ್ಡಿ ಮಗ್ನೇ”
ಸೋಂಬೇರಿ ಪೋಲಿಸ್ ಆಫೀಸರ್ ನ ಪಾತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಅಭಿನಯದ ಚಿತ್ರ “ಶಭಾಷ್ ಬಡ್ಡಿ ಮಗ್ನೇ”. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಹಾಗೂ ಕೆಲವು ಹಾಡುಗಳು ಬಿಡುಗಡೆಯಾಗಿದ್ದು, ತಿಳಿಹಾಸ್ಯ ಹಾಗೂ ಸಸ್ಪೆನ್ಸ್ ತೆರೆದಿಡುತ್ತಿದೆ ಚಿತ್ರದ ಟ್ರೈಲರ್. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ಬಿ.ಎಸ್. ರಾಜಶೇಖರ್. ಚೈತ್ರಾ ಪ್ರಕಾಶ್ ನಿರ್ಮಾಣದ ಈ ಚಿತ್ರ ಫೆ.28 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

90 ರ ದಶಕದ ಸೋಂಬೇರಿ ಪೋಲಿಸ್ ಕತೆ
90 ರ ದಶಕದಲ್ಲಿ ನಡೆದ ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕತೆಯನ್ನು ಹೆಣೆಯಲಾಗಿದೆ. ಅಂದಿನ ಕಾಲಘಟ್ಟಕ್ಕೆ ಹೊಂದುವಂತಹಾ ಕಾಸ್ಟ್ಯೂಮ್ ಹಾಗೂ ಸೆಟ್ ಗಳನ್ನು ಚಿತ್ರದಲ್ಲಿ ಬಳಸಿಕೊಂಡು ವಿಶಿಷ್ಟವಾಗಿ ಚಿತ್ರೀಕರಣ ಮಾಡಲಾಗಿದೆ. ಮನೋರಂಜನಾತ್ಮಕ ಸಿನಿಮಾ ಇದಾಗಿದ್ದು, ವೃತ್ತಿ ಬದುಕಿಗಿಂತ ವೈಯಕ್ತಿಕ ಜೀವನದಲ್ಲೇ ಹೆಚ್ಚು ಆಸಕ್ತಿ ಹೊಂದಿರುವ ಸೋಂಬೇರಿ ಪೋಲಿಸ್ ಅಧಿಕಾರಿಯೊಬ್ಬನ ಕತೆಯೇ ಚಿತ್ರದ ಜೀವಾಳ. ಚಿತ್ರ ಹಾಸ್ಯ ಭರಿತವಾಗಿದ್ದು, ನೋಡುಗರಿಗೆ ಖಂಡಿತಾ ಮನರಂಜಕವಾಗಿರಲಿದೆ ಎಂಬುದು ಚಿತ್ರತಂಡದವರ ಅಭಿಪ್ರಾಯ.