ಶಿವರಾಜ್ ಕುಮಾರ್ ಅಭಿನಯದ ‘ಎಂಬಿ’ ಚಿತ್ರ ಅನೌನ್ಸ್.!

Date:

  • ಶಿವರಾಜ್ ಕುಮಾರ್ ಅಭಿನಯದ ‘ಎಂಬಿ’ ಚಿತ್ರ ಅನೌನ್ಸ್.!
  • ಶಸ್ತ್ರಚಿಕಿತ್ಸೆಯ ನಡುವೆಯೇ ಅಭಿಮಾನಿಗಳಿಗೆ ಹೊಸ ಸಿನಿಮಾದ ಸಿಹಿಸುದ್ದಿ ಕೊಟ್ಟ ಶಿವಣ್ಣ

ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ Shivarajkumar ಸದ್ಯ ಅನಾರೋಗ್ಯದ ಕಾರಣ ಹೆಚ್ಚುವರಿ ಶಸ್ತ್ರಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದಾರೆ. ಈ ಸುದ್ದಿ ಶಿವಣ್ಣನ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ‘ಶಿವಣ್ಣ ಬೇಗ ಹುಷಾರಾಗಿ ಬನ್ನಿ’ ಎಂದು ಬರೆದುಕೊಳ್ಳುತ್ತಿದ್ದಾರೆ. ಒಂದೆಡೆ ಶಿವಣ್ಣನ ಆರೋಗ್ಯದ ಸಮಸ್ಯೆಯಿಂದ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದ್ದರೆ, ಮತ್ತೊಂದೆಡೆ ಇಲ್ಲೊಂದು ಚಿತ್ರತಂಡ ಶಿವಣ್ಣನಿಗೆ ತಾವು ನಿರ್ಮಿಸಲು ತಯಾರಾಗಿರುವ ಸಿನಿಮಾವನ್ನು ಅನೌನ್ಸ್ ಮಾಡಿದೆ. ಈ ಮೂಲಕ ಶಿವಣ್ಣ ಅಭಿಮಾನಿಗಳಿಗೆ ಬೇಸರದ ನಡುವೆ ಖುಷಿ ತಂದಿದೆ.

ಎಂಬಿ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿರ್ದೇಶಕ ಮಹಾರಾಜನ್;

ಇನ್ನು ಶಿವಣ್ಣ ಅಭಿನಯದ ಈ ಚಿತ್ರಕ್ಕೆ ‘ಎಂಬಿ’ MB Movie ಎಂದು ಶೀರ್ಷಿಕೆ ಇಡಲಾಗಿದ್ದು, ಎನ್ ಮಹಾರಾಜನ್ N Maharajan ಅವರು ಎಂಬಿ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಇಲ್ಲಿಯವರೆಗೆ 3 ತಮಿಳು ಮತ್ತು ಹಿಂದಿ ಸಿನಿಮಾವೊಂದನ್ನು ನಿರ್ದೇಶನ ಮಾಡಿರುವ ಮಹಾರಾಜನ್‌ ಅವರು ‘ಎಂಬಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಇನ್ನು ಶಿವರಾಜಕುಮಾ‌ರ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗುತ್ತಿದೆ. ಕನ್ನಡದ ಹೆಸರಾಂತ ನಟ ಶಿವರಾಜಕುಮಾ‌ರ್ ಅವರ ಅಭಿನಯದ ಈ ಚಿತ್ರವನ್ನು ನಿರ್ಮಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ಮಾಪಕರು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...