ಭೈರತಿ ರಣಗಲ್ ಶೂಟಿಂಗ್ ನಲ್ಲಿ ಭಾಗಿಯಾದ ಶಿವರಾಜ್ ಕುಮಾರ್

Date:

ಮಫ್ತಿ ಸಿನಿಮಾದ ಪಾತ್ರವೊಂದರ ಹೆಸರನ್ನು ಇಟ್ಟುಕೊಂಡು ನಿರ್ದೇಶಕ ನರ್ತನ್ ‘ಭೈರತಿ ರಣಗಲ್’ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮುಹೂರ್ತ ಕೂಡ ನೆಡೆದಿತ್ತು. ಇಂದಿನಿಂದ ಚಿತ್ರೀಕರಣ ಆರಂಭಿಸಿದ್ದಾರೆ ನರ್ತನ್. ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ.

ಮಫ್ತಿ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಭೈರತಿ ರಣಗಲ್ ಹೆಸರಿನ ಪಾತ್ರ ಮಾಡಿದ್ದರು. ಮಫ್ತಿ ಸಿನಿಮಾ ಹಿಟ್ ಕೂಡ ಆಗಿತ್ತು. ಇದೀಗ ಆ ಪಾತ್ರವನ್ನಿಟ್ಟುಕೊಂಡು ನರ್ತನ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. 

ಈ ನಡುವೆ ಶಿವರಾಜ್ ಕುಮಾರ್ ಮತ್ತು ರಜನಿಕಾಂತ್ ಕಾಂಬಿನೇಷನ್ ನ ಜೈಲರ್ ಸಿನಿಮಾ ರಿಲೀಸ್ ಆಗುತ್ತಿದ್ದು, ದಕ್ಷಿಣದ ಹೆಸರಾಂತ ಸ್ಟಾರ್ ನಟರೇ ಈ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಟ್ಟು ಹತ್ತು ನಿಮಿಷಗಳ ಕಾಲ ತೆರೆಯ ಮೇಲೆ ಕಾಣಲಿದ್ದಾರಂತೆ. ಹತ್ತು ನಿಮಿಷವಿದ್ದರೂ ಕಥೆಗೆ ಮತ್ತೊಂದು ತೂಕವನ್ನು ಕೊಡುವಂತ ಪಾತ್ರ ಅದಾಗಿದೆಯಂತೆ. ಅಷ್ಟರ ಮಟ್ಟಿಗೆ ಪಾತ್ರ ಪವರ್ ಫುಲ್ ಆಗಿದೆ ಎನ್ನುವುದು ಶಿವಣ್ಣ ಮಾತು.

ಜೈಲರ್’ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ”

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ” ತುಳು...

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್”

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್" ಶರತ್ ರಾಯ್ಸದ್ ನಿರ್ದೇಶನದಲ್ಲಿ ಮೂಡಿಬಂದಿದೆ ಅದ್ಭುತ ಕಿರುಚಿತ್ರ ನೋಡುಗರನ್ನು...

ಜನಪದ ಶೈಲಿಯಲ್ಲಿ ಬಿಡುಗಡೆ ಆಯ್ತು “ಪಪ್ಪಿ” ಚಿತ್ರದ “ಕಾಲ ಕೆಟ್ಟೈತಂತ” ಹಾಡು

ಜನಪದ ಶೈಲಿಯಲ್ಲಿ ಬಿಡುಗಡೆ ಆಯ್ತು “ಪಪ್ಪಿ" ಚಿತ್ರದ “ಕಾಲ ಕೆಟ್ಟೈತಂತ" ಹಾಡು ಹಿಟ್...

ನೈಜ ಕಥೆ ಆಧಾರಿತ ರೋಚಕ ಸಿನಿಮಾ “ಜಾಕಿ 42”

ನೈಜ ಕಥೆ ಆಧಾರಿತ ರೋಚಕ ಸಿನಿಮಾ “ಜಾಕಿ 42” ನಿರ್ದೇಶಕ ಗುರುತೇಜ್ ಶೆಟ್ಟಿ...