- ಖ್ಯಾತ ನಟ, ನಿರ್ದೇಶಕ ಅರ್ಜುನ್ ಸರ್ಜಾ ಆಕ್ಷನ್ ಕಟ್ ಹೇಳಿರುವ ಚಿತ್ರ “ಸೀತಾಪಯಣ”
- ಏಪ್ರಿಲ್ ನಲ್ಲಿ ಪಯಣ ಆರಂಭಿಸಲಿದೆ “ಸೀತಾಪಯಣ”
- ಹದಿಹರೆಯದವೆ ಭಾವಬಾತ್ಮಕ ಪಯಣದ ಕಥಾಹಂದರ ಹೊಂದಿರುವ ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.
ಜೈಹಿಂದ್, ಅಭಿಮನ್ಯು, ಪ್ರೇಮಬರಹ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಫೇಮಸ್ ಆಗಿದ್ದ ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ Arjun Sarja ಅವರ ಬತ್ತಳಿಕೆಯ ಮುಂದಿನ ಸಿನಿಮಾ “ಸೀತಾಪಯಣ” Seethapayana ಅವರ ಮಗಳು ಐಶ್ವರ್ಯಾ Aishwarya ಹಾಗೂ ಉಪೇಂದ್ರ ಅಣ್ಣನ ಮಗ ನಿರಂಜನ್ Niranjan ಜೋಡಿಯಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರ ತೆರೆಯ ಮೇಲೆ ತರುವ ಪ್ಲಾನ್ ಚಿತ್ರತಂಡದ್ದು. ಇಬ್ಬರು ಹದಿಹರೆಯಯ ಜೋಡಿಗಳ ಭಾವನಾತ್ಮಕ ಪಯಣದ ಕತೆ ಸಾರುವ ಚಿತ್ರ ಇದಾಗಿದೆ.
ತಾರಾಗಣದಲ್ಲಿದ್ದಾರೆ ದಿಗ್ಗಜರು
ಸ್ವತಃ ಅರ್ಜುನ್ ಸರ್ಜಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಪ್ರಕಾಶ್ ರಾಜ್ Prakash Raj, ಸತ್ಯರಾಜ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅನುಪ್ ರುಬೆನ್ಸ್ ಸಂಗೀತ, ಬಾಲಮುರುಗನ್ ಛಾಯಾಗ್ರಹಣ ಚಿತ್ರಕ್ಕಿದ್ದು, ಆಯೂಬ್ ಖಾನ್ ಸಂಕಲನವಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರೂ ಭಾಷೆಗಳಲ್ಲೂ ಚಿತ್ರ ಸಿದ್ಧಗೊಳ್ಳುತ್ತಿದೆ.