- ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ
- ರೋಡ್ ಸೈಡ್ ರಾಂಬ್ಲಿಂಗ್ ಫಿಲ್ಮ್ಸ್ ತಂಡದ ಚಿತ್ರಕ್ಕೆ ವಿಘ್ನೇಶ್ ಪೂಜಾರಿ ಆಕ್ಷನ್ ಕಟ್ ಹೇಳಿದ್ದಾರೆ.
- ಸಂದೀಪ್ ಸದಾನಂದನ್, ಮಾನ್ವಿ ಕಿಶೋರ್ ಚೊಚ್ಚಲ ನಾಯಕತ್ವದ ಸಿನಿಮಾ
ಬಹುಸಂಸ್ಕೃತಿ ನಗರಿಯಾದ ಬೆಂಗಳೂರಿನಲ್ಲಿ ನಡೆಯುವ ರೋಮಾಂಚಕ ಹೃದಯಸ್ಪರ್ಶಿ ಪ್ರಣಯ ಹಾಸ್ಯ ಚಿತ್ರ “ಸಿಕ್ಸ್ ಮಂಥ್ಸ್ ನೋಟಿಸ್” Six months notice ಅನೌನ್ಸ್ ಆಗಿದ್ದು, ರೋಡ್ ಸೈಡ್ ರಾಂಬ್ಲಿಂಗ್ ಫಿಲ್ಮ್ಸ್ Roadside Ramblong Films ಈ ಚಿತ್ರವನ್ನು ಘೋಷಣೆ ಮಾಡಿದೆ. 2024 ರ “ಚಶ್ಮಾ” ಸಿನಿಮಾದ ಯಶಸ್ಸಿನ ನಂತರ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ಇದಾಗಿದೆ. ಚಶ್ಮಾ Chashma ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದು ಇದೀಗ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಕುಂದಾಪುರದ ವಿಘ್ನೇಶ್ ಪೂಜಾರಿ Vighnesh Poojary.
ಹೊಸಮುಖಗಳ ಹುರುಪು
ಚಿತ್ರದಲ್ಲಿ ನಾಯಕ ನಟನ ಸ್ಥಾನವನ್ನು ವಹಿಸಲಿದ್ದಾರೆ ಸಂದೀಪ್ ಸದಾನಂದನ್ Sandeep Sadanandan. ಕನ್ನಡ ಮತ್ತು ಮಲಯಾಳಂ ಕಿರುಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಬೆಂಗಳೂರಿನ ಹುಡುಗನ ಚೊಚ್ಚಲ ನಾಯಕತ್ವ ಚಿತ್ರಕ್ಕಿರಲಿದ್ದು, ಇವರಿಗೆ ನಾಯಕಿಯಾಗಿ ಸಾಥ್ ನೀಡಲಿದ್ದಾರೆ ಜಾರ್ಖಂಡ್‌ನ ರಾಂಚಿ ಮೂಲದ ಮಾನ್ವಿ ಕಿಶೋರ್ Manvi Kishor. ಸುಮನೇಶ್ ನಿರಂಜನ್, ದಿಶಾ ಹುಡೇದ್ ಮುಂತಾದವರು ಮುಖ್ಯಪಾತ್ರಗಳನ್ನು ನಿರ್ವಹಿಸಿದ್ದಾರೆ.

ನೆರೆಹೊರೆಯ ಹುಡುಗರ ಪ್ರೀತಿಯ ಕಥೆ
“ಸಿಕ್ಸ್ ಮಂತ್ ನೋಟಿಸ್” ಚಿತ್ರವು ಬೆಂಗಳೂರಿನ ಕನ್ನಡ ಮಾತನಾಡುವ ಹುಡುಗ ಮತ್ತು ಗಾಜಿಯಾಬಾದ್‌ನ ಹಿಂದಿ ಮಾತನಾಡುವ ಹುಡುಗಿ ಅಪಾರ್ಟ್ಮೆಂಟ್ ನೆರೆಹೊರೆಯಲ್ಲಿ ವಾಸವಾಗಿ, ಪರಿಚಿತರಾಗುತ್ತಾರೆ ಕನ್ನಡ ಚಲನಚಿತ್ರಗಳನ್ನು ಪ್ರೀತಿಸುವ ಹುಡುಗ, ಹಿಂದಿ ಚಲನಚಿತ್ರಗಳನ್ನು ಪ್ರೀತಿಸುವ ಹುಡುಗಿಯ ನಡುವೆ ವಿಭಿನ್ನತೆ, ಘರ್ಷಣೆಗಳ ಮಧ್ಯೆ ಪ್ರೀತಿ ಹುಟ್ಟುತ್ತದೆ. ಬೆಂಗಳೂರಿನಂತಹಾ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಊರಿನ ಕತೆಯೂ ಈ ಚಿತ್ರದ ಮುಖ್ಯಭಾಗ. ಈ ಚಿತ್ರವುಬ ಪುಣೆ ಮೂಲದ VDO ಜಾರ್ OTT ಅಪ್ಲಿಕೇಶನ್‌ನಲ್ಲಿ ಪ್ರತ್ಯೇಕವಾಗಿ ಬಿಡುಗಡೆಯಾಗಲಿದೆ.


