- ಹೃದಯಗಳ ಪ್ರೀತಿಯೂ ಇದೆ, ಪರಿಸರ ಪ್ರೀತಿಯನ್ನೂ ಹೇಳಲಿದೆ “ಸೋಲ್ ಮೇಟ್ಸ್”
- ರೊಮ್ಯಾನ್ಸ್, ಆಕ್ಷನ್, ಥ್ರಿಲ್ಲರ್ ಕಥಾಹಂದರದ ವಿಭಿನ್ನ ಚಿತ್ರ
- ಕುತೂಹಲ ಕೆರಳಿಸಿದೆ “ಸೋಲ್ ಮೇಟ್ಸ್” ಟ್ರೈಲರ್
ಪರಿಸರ ಕಾಳಜಿಯ ಸಂದೇಶದೊಡನೆ ರೊಮ್ಯಾನ್ಸ್, ಆಕ್ಷನ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ “ಸೋಲ್ ಮೇಟ್ಸ್” Soulmates ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸೆ. 19 ಕ್ಕೆ ಚಿತ್ರ ಥಿಯೇಟರ್ ಗಳಿಗೆ ಎಂಟ್ರಿ ಕೊಡಲಿದೆ. ಪಿ.ವಿ. ಶಂಕರ್ P.V. Shankar ನಿರ್ದೇಶನ ಮಾಡಿರುವ ಈ ಚಿತ್ರವನ್ನು ಜಿ.ಆರ್. ಅರ್ಚನಾ G.R.Archana ಹಾಗೂ ಶಂಕರ್ ಪಿ.ವಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಂಗ್ ಬಿ ರಂಗ್ ಖ್ಯಾತಿಯ ಶ್ರೀಜಿತ್ ಸೂರ್ಯ, ಪ್ರಸನ್ನ ಶೆಟ್ಟಿ, ರಜನಿ, ಯಶ್ವಿಕಾ ನಿಷ್ಕಲ, ಅಲ್ಮಾಸ್, ಯಶ್ ಶೆಟ್ಟಿ, ಅರವಿಂದ್ ರಾವ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಪ್ರಶಾಂತ್ ನಟನ, ಅರಸು ಮಹಾರಾಜ್, ಗೌತಮ್, ತಾರಕ್, ನವೀನ್ ಡಿ. ಪಡೀಲ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
“ಪರಿಸರ ಪ್ರೇಮಿ” ಚಿತ್ರ:
ಚಿತ್ರಕ್ಕೆ “ಪರಿಸರ ಪ್ರೇಮಿ” ಎನ್ನುವ ಅಡಿಬರಹ ಇರುವುದರಿಂದ ಇದೊಂದು ಒಳ್ಳೆಯ ಪರಿಸರ ಸಂದೇಶ ಕೊಡುವ ಕತೆ ಎನ್ನುವ ವ್ಯಾಖ್ಯಾನ ಸ್ಯಾಂಡಲ್ ವುಡ್ ನದ್ದು. ಸಿನಿಮಾದಲ್ಲಿ ಹುಡುಗ-ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯನ್ನೂ ಹೇಳಲಾಗಿದೆ, ಈಗಿನ ಸಮಾಜಕ್ಕೆ ಈ ಕತೆ ತುಂಬ ಅವಶ್ಯಕವಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಈ ಸಿನಿಮಾದಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಚಿತ್ರದ ಹಾಡೊಂದರ ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿದೆ. ಚಿತ್ರಕ್ಕೆ ಹಂಸಲೇಖ Hamsalekha ಸಂಗೀತವಿದೆ. ಸಿನಿಮಾದಲ್ಲಿ ಶ್ರೀಜಿತ್ ಶೆಟ್ಟಿ ಅವರು ಸತ್ಯ ಎಂಬ ಪಾತ್ರ ಮಾಡಿದ್ದಾರೆ. ಭೂಮಿ ಎಂಬ ಪಾತ್ರಕ್ಕೆ ನಿಷ್ಕಲಾ ಶೆಟ್ಟಿ ಅವರು ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಪ್ರಸನ್ನ ಶೆಟ್ಟಿ ಅವರು ಗೋಪಿ ಎಂಬ ಮುಗ್ಧ ಹಳ್ಳಿ ಯುವಕನ ಪಾತ್ರವನ್ನು ನಿಭಾಯಿಸಿದ್ದಾರೆ. ವಿಭಿನ್ನ ಸಂದೇಶ ನೀಡುವ ಕತೆಯಾದ್ದರಿಂದ ಸಹಜವಾಗಿಯೇ ಚಿತ್ರದ ಕುರಿತ ಕುತೂಹಲ ಇನ್ನಷ್ಟು ಗರಿಗೆದರಿದೆ.