ಘೋಷಣೆಯಾಯ್ತು ಆಧ್ಯಾತ್ಮಿಕ ಥ್ರಿಲ್ಲರ್ ಮೂವೀ “ಸಹ್ಯಾದ್ರಿ”

Date:

  • ಘೋಷಣೆಯಾಯ್ತು ಆಧ್ಯಾತ್ಮಿಕ ಥ್ರಿಲ್ಲರ್ ಮೂವೀ “ಸಹ್ಯಾದ್ರಿ”
  • “ಆರ’” ಚಿತ್ರದ ಮೂಲಕ ಫೇಮಸ್ ಆಗಿದ್ದ ನಟ, ನಿರ್ದೇಶಕ ರೋಹಿತ್ ಮುಂದಿನ ಚಿತ್ರ
  • ರಿಲೀಸ್ ಆಗಿದೆ ಚಿತ್ರದ ಶೀರ್ಷಿಕೆ ಟೀಸರ್

ಎ.ಆರ್. ಫಿಲ್ಮ್ಸ್ AR Films ಬ್ಯಾನರ್ ಅಡಿಯಲ್ಲಿ ರೇಣುಕಾ ಪಿ.ಎನ್ Renuka P N ನಿರ್ಮಾಣ ಮಾಡ್ತಿರೋ ಸಿನಿಮಾ “ಸಹ್ಯಾದ್ರಿ” Sahyadri ಇದರ ಟೈಟಲ್ ಟೀಸರ್ ಮೂಲಕ ಬಿಡುಗಡೆಯಾಗಿದ್ದು, 2023 ರಲ್ಲಿ ಬಿಡುಗಡೆಗೊಂಡಿದ್ದ “ಆರ” ಮೂವೀ ಮೂಲಕ ಫೇಮಸ್ ಆಗಿದ್ದ, ನಟ-ನಿರ್ದೇಶಕ ರೋಹಿತ್ Rohith ಅವರ ಮುಂದಿನ ಪ್ರಾಜೆಕ್ಟ್ ಇದಾಗಿರಲಿದೆ. ಇದು ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ವಸ್ತು ವಿಷಯವನ್ನೊಳಗೊಂಡ ಚಿತ್ರವಾಗಿರಲಿದ್ದು, ಆಧ್ಯಾತ್ಮಿಕ ಥ್ರಿಲ್ಲರ್ ಚಿತ್ರವಾಗಿರಲಿದೆ ಎನ್ನಲಾಗಿದೆ. ಅದರೊಂದಿಗೆ ಚಿತ್ರವು ತೀವ್ರವಾದ ಮತ್ತು ಭಾವನಾತ್ಮಕವಾಗಿ ಬೇರೂರಿದ ಅಂಶವನ್ನು ಒಳಗೊಂಡಿದೆ ಎಂದಿದ್ದಾರೆ ನಿರ್ದೇಶಕರು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಥ್ರಿಲ್ಲರ್ ಚಿತ್ರ

ಅಸಾಧಾರಣವಾಗಿ ಮೆದುಳಿನಲ್ಲಿ ಹೆಚ್ಚಿನ ಸಂಖ್ಯೆಯ ನರಕೋಶಗಳನ್ನು ಹೊಂದುತ್ತಾ ಅಕಾಲಿಕವಾಗಿ ಜನಿಸಿದ ಮಗುವಿನ ಕಥೆಯನ್ನು ಹೇಳುತ್ತದೆ ಚಿತ್ರ. ಆ ಮಗು ಬೆಳೆದಂತೆ, ಅಪಾರ ಶಕ್ತಿಗಳನ್ನು ತಡೆದುಕೊಳ್ಳುವ ಮತ್ತು ನಿಯಂತ್ರಿಸುವ ಸಾಮರ್ಥ್ಯವಿರುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತದೆ. ಇದರ ಸುತ್ತ ಬೆಳೆಯುತ್ತಾ ಸಾಗುತ್ತದೆ ಚಿತ್ರದ ಕಥಾಹಂದರ. ಮೊದಲಿಗೆ ಕನ್ನಡದಲ್ಲಿ ಚಿತ್ರೀಕರಣಗೊಂಡು ನಂತರ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್ಗೆ ಡಬ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಪಶ್ಚಿಮ ಘಟ್ಟಗಳ ರಮಣೀಯ ಪ್ರದೇಶಗಳಲ್ಲಿ, ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

ವಿನೋದ್ ಲೋಕಣ್ಣನವರ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದು, ನವನಾಥ್ ವಾಸುದೇವ್ ಸಂಗೀತ ಸಂಯೋಜನೆ, ಮಾದೇಶ್ ರಾಜ್ ಸಂಕಲನ ಮತ್ತು ವಿ.ಎಫ್.ಎಕ್ಸ್. ಅನ್ನು ನೋಡಿಕೊಳ್ಳಲಿದ್ದಾರಂತೆ. ಚಿತ್ರದ ತಾರಾಬಳಗದ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. 2026 ರ ಜುಲೈ ಸಮಯದಲ್ಲಿ ಚಿತ್ರ ತೆರೆಗೆ ತರುವ ಪ್ಲಾನ್ ಚಿತ್ರತಂಡದ್ದು.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...