- ಸಕ್ಸಸ್ ಆಯ್ತು “ನೋಡಿದವರು ಏನಂತರೆ”, ಯಶಸ್ವಿ 50 ನೇ ದಿನದತ್ತ ಧಾಪುಗಾಲು
- ಸಾರ್ಥಕವಾಯ್ತು ನಿರ್ದೇಶಕ, ತಾರಾಗಣ ಹಾಗೂ ಚಿತ್ರತಂಡದವರ ಪರಿಶ್ರಮ
- ಬಿಡುಗಡೆಯ ನಂತರ ಯಶಸ್ಸಿನ ಹಾದಿಹಿಡಿಯುವ ಬೆರಳೆಣಿಕೆಯ ಚಿತ್ರಗಳಲ್ಲಿ ಇದೂ ಒಂದು
ಕೇವಲ ಎರಡು ಗಂಟೆಗಳ ಸಿನಿಮಾಕ್ಕೆ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಂದು ಹಿಡಿದು ಪ್ರತಿಯೊಬ್ಬರ ಪರಿಶ್ರಮ, ವರ್ಷಗಳ ಸಮಯ ಎಲ್ಲವೂ ಒಂದು ಸಿನಿಮಾ ಯಶಸ್ವಿಯಾಗಲು ಬಹುಮುಖ್ಯ ಪಾತ್ರವಹಿಸುತ್ತದೆ. ಆ ಪರಿಶ್ರಮದ ಸಾರ್ಥಕತೆ ಸಿನಿಮಾ ತಂಡಕ್ಕೆ ಸಿಗುವುದು ಹಣದಷ್ಟೇ ಮುಖ್ಯ ಸಿನಿ ಪ್ರೇಕ್ಷಕ ಅದನ್ನು ಮೆಚ್ಚಿಕೊಂಡಾಗ ಹಾಗೂ ಮುನ್ನಡೆಸಿಕೊಂಡು ಹೋದಾಗ. ಇದೀಗ ಜನವರಿ 31 ಕ್ಕೆ ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ರಿಲೀಸ್ ಆದ “ನೋಡಿದವರು ಏನಂತಾರೆ” Nodidavaru Enantare Kannada Movie ಚಿತ್ರ ಸಾರ್ಥಕತೆಯ 50 ದಿನಗಳನ್ನು ಪೂರೈಸುವತ್ತ ಧಾಪುಗಾಲಿಡುತ್ತಿದೆ.
ಸಂತಸಹಂಚಿಕೊಂಡ ಚಿತ್ರತಂಡ
ಒಂದು ಚಿತ್ರದ ಯಶಸ್ಸಿಗೆ ಆ ಚಿತ್ರ ನಿರ್ದೇಶಕರು ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಹಾಗೇ ಚಿತ್ರದ ಯಶಸ್ಸಿನ ಸಂದರ್ಭದಲ್ಲಿ ನಿರ್ದೇಶಕ ಕುಲದೀಪ್ ಈ ರೀತಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. “ಒಂದು ಸಣ್ಣ ಕನಸಿನಿಂದ ಶುರುವಾದ ಪಯಣ ನೋಡಿದವರು ಏನಂತಾರೆ. ಅದು ಹೋಗ್ತಾ ಹೋಗ್ತಾ ಸಾಕಷ್ಟು ರೂಪಾಂತರ ಕಂಡು ತನ್ನದೇ ದಾರಿ ಕಂಡುಕೊಂಡು ಜನರ ಮುಂದೆ ಇಷ್ಟು ದೊಡ್ಡದಾಗಿ ನಿಲ್ಲುತ್ತದೆ ಎಂದುಕೊಂಡಿರಲಿಲ್ಲ. ನಮ್ಮ ಪಾಲಿಗೆ ಇದು ದೊಡ್ಡ ಯಶಸ್ಸು.” ನಿರ್ಮಾಪಕರಾದ ನಾಗೇಶ್ ಗೋಪಾಲ್ ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ವಿಶಿಷ್ಟ ಶೀರ್ಷಿಕೆಯಿಂದಲೇ ಎಲ್ಲರ ಮನಸೆಳೆಯುವ ಈ ಚಿತ್ರದಲ್ಲಿ ನಾಯಕ ನವೀಶ್ ಶಂಕರ್, ನಾಯಕಿ ಅಪೂರ್ವ ಭಾರದ್ವಾಜ್ ಹಾಗೂ ಇತರ ತಾರಾಗಣ ಕೂಡಾ ಅದ್ಭುತವಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಈ ಚಿತ್ರಕ್ಕೆ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದು, ಮನು ಶೆಡಗಾರ್ ಸಂಕಲನ ಇದ್ದು, ಕುಲದೀಪ್ ಕಾರಿಯಪ್ಪ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.