- ಮಾರ್ಚ್ 6 ರಂದು ತೆರೆಯ ಮೇಲೆ “ಸೂರಿ ಲವ್ಸ್ ಸಂಧ್ಯಾ”
- ಚಿತ್ರನಟ ಕಾಶಿನಾಥ್ ಪುತ್ರ ಅಭಿಮನ್ಯು ಹಾಗೂ ಅಪೂರ್ವ ಜೋಡಿಯಾಗಿ ನಟಿಸುತ್ತಿರುವ ಚಿತ್ರ
- ಹಲವು ಟ್ವಿಸ್ಟ್ ಗಳನ್ನು ಒಳಗೊಂಡಿರೋ ಸರಳ ಪ್ರೇಮಕಥೆ “ಸೂರಿ ಲವ್ಸ್ ಸಂಧ್ಯಾ”
ಇತ್ತೀಚೆಗಷ್ಟೇ ಉಪೇಂದ್ರ Upendra ಅವರಿಂದ “ಸೂರಿ ಲವ್ಸ್ ಸಂಧ್ಯಾ” Soori Loves Sandhya ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಮೇಲ್ನೋಟಕ್ಕೆ ಇದೊಂದು ಹಲವು ಟ್ವಿಸ್ಟ್ ಗಳನ್ನು ಒಳಗೊಂಡಿರಬಹುದಾದ ಸರಳ ಪ್ರೇಮಕಥೆ ಎಂದೆನಿಸಿದರೂ ಚಿತ್ರ ಹೇಗಿರಬಹುದೆಂಬ ಕುತೂಹಲ ಹುಟ್ಟಿಸುತ್ತಿದೆ ಚಿತ್ರದ ಟ್ರೇಲರ್. 7 ಕ್ರೋರ್ ಎಂಟರ್ಟೈನ್ಮೆಂಟ್ 7 Crore Entertinement ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಕೆ.ಟಿ.ಮಂಜುನಾಥ್ ಅವರು ನಿರ್ಮಿಸುತ್ತಿದ್ದು, ಯಾದವ್ ರಾಜ್ Yadav Raj ಕಥೆ, ಚಿತ್ರಕಥೆ,, ಸಾಹಿತ್ಯ, ಸಂಭಾಷಣೆಯೊಂದಿಗೆ ಚಿತ್ರಕ್ಕೆ ಆಕ್ಷನ್ ಕಟ್ ಕೂಡಾ ಹೇಳಿದ್ದಾರೆ.
ಅಬ್ಬರವಿಲ್ಲದೇ ಸಾಗುವ ಸರಳ ಪ್ರೇಮಕಥೆ
ಟೈಟಲ್ ಹಾಗೂ ಟ್ರೇಲರ್ ಗಳಲ್ಲೇ ಇದೊಂದು ಪ್ರೇಮಕಥೆ ಎಂದು ಊಹಿಸಬಹುದಾಗಿದ್ದು, ನಿರ್ದೇಶಕರ ಮಾತುಗಳಲ್ಲಿ ಹೇಳೋದಾದ್ರೆ “ಸೂರಿ ಲವ್ಸ್ ಸಂಧ್ಯಾ ಒಂದು ಸರಳ ಪ್ರೇಮಕತೆ. ಇಡೀ ಸಿನಿಮಾ ನೈಜವಾಗಿ ಸಾಗುತ್ತದೆ. ಯಾವುದೇ ಅಬ್ಬರವಿಲ್ಲದೇ ಸಾಗುವ ಕಥೆಯಲ್ಲಿ ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್ ಗಳು ಬಂದು ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತದೆ. ನಾಯಕ ಅಭಿಮನ್ಯು Abhimanyu ಬಾರ್ ಸಪ್ಲೇಯರ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಪೂರ್ವ ಮಧ್ಯಮ ವರ್ಗದ ಹುಡುಗಿಯಾಗಿ ನಟಿಸಿದ್ದಾರೆ”. ಮಾರ್ಚ್ ಆರಕ್ಕೆ ಹೊರಬರಲಿದೆ ಈ ಚಿತ್ರ.