- “ಮಾಯಾವಿ” ಹೊಸಬರ ಪ್ರಯತ್ನದ ಚಿತ್ರದ ಟೀಸರ್ ಅನಾವರಣ
- ಶಂಕರ್ ಜಿ ನಿರ್ದೇಶನದ, ಹೊಸಪ್ರತಿಭೆಗಳ ಚಿತ್ರ “ಮಾಯಾವಿ”
- ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ ಟೀಸರ್ ಹಾಗೂ ಹಾಡು
ಕೋಟೆನಾಡು, ಚಿತ್ರದುರ್ಗದ ಪ್ರತಿಭೆ ರಘುರಾಮ್ Raghuram ನಾಯಕತ್ವ ಹಾಗೂ ಶಂಕರ್ ಜಿ Shankar G ನಿರ್ದೇಶನದ ಸಿನಿಮಾ “ಮಾಯಾವಿ” Maayavi ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಸಂದರ್ಭದಲ್ಲೇ ಇತ್ತೀಚೆಗೆ ಪರಮಪೂಜ್ಯರಾದ ಶ್ರೀ ಶಾಂತವೀರ ಮಹಾಸ್ವಾಮಿಗಳು ಹಾಗೂ ಶ್ರೀ ಈಶ್ವರಾನಂದಾಪುರಿ ಸ್ವಾಮಿಗಳ ಅಮೃತ ಹಸ್ತದಿಂದ ಈ ಚಿತ್ರದ ಟೀಸರ್ ಹಾಗೂ ಒಂದು ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಗೊಂಡಿದ್ದು, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ ಪೂಜ್ಯರು.
ಸಸ್ಪೆನ್ಸ್, ಥ್ರಿಲ್ಲರ್ ಜಾನರ್
ಇಷ್ಟ ಎಂಟರ್ಪ್ರೈಸಸ್ Ishta Enterprises ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ರಾಘವೇಂದ್ರ ಆರ್. Raghavendra R ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ನಾಯಕಿಯಾಗಿ ನಿಶ್ಚಿತ ಶೆಟ್ಟಿ Nishchitha Shetty ಮಿಂಚಿದ್ದು, ಎಂ.ಕೆ.ಮಠ್, ಸುರೇಶ್ ಬಾಬು, ಸೂರ್ಯ ಪ್ರವೀಣ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ “ಆವರಿಸು” ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ Vijaya Prakash ಹಾಡಿದ್ದು, ಆನಂದ್ ಕಮ್ಮಸಾಗರ ಸಾಹಿತ್ಯ ಹಾಗೂ ಅಗಸ್ತ್ಯ ಸಂತೋಷ್ ಸಂಗೀತವಿದೆ.