- ಪಿನಾಕ ಚಿತ್ರದ ಟೀಸರ್ ರಿಲೀಸ್.!
- ತೀವ್ರ ಕುತೂಹಲ ಸೃಷ್ಟಿಸಿದ ಗಣೇಶ್ 49ನೇ ಸಿನಿಮಾ
ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ಅಭಿನಯದ 49 ನೇ ಚಿತ್ರದ ಟೈಟಲ್ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಗಣೇಶ್ ಹೊಸ ರೀತಿಯಲ್ಲಿಯೇ ಬರ್ತಿದ್ದಾರೆ. ಹಿಂದೆ ಎಂದೂ ಮಾಡದೇ ಇರೋ ಪಾತ್ರವನ್ನೆ ಗಣೇಶ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸದೊಂದು ಅನುಭವ ಕೊಡಲು ಗಣಿ ರೆಡಿ ಆಗಿದ್ದಾರೆ.
ಪಿನಾಕ ಚಿತ್ರದ ಟೀಸರ್ ರಿಲೀಸ್;
ಪಿನಾಕ ಚಿತ್ರದ Pinaka Movie ಟೀಸರ್ ಅಲ್ಲಿ ಇನ್ನು ಒಂದು ವಿಷಯ ಇದೆ. ಅದನ್ನ ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಿಸುತ್ತಲೇ ಹೋಗುತ್ತಾರೆ. ಪುರಾತತ್ವ ಇಲಾಖೆಯ ಸಿಬ್ಬಂದಿ ಏನೋ ಒಂದು ಉತ್ಪನನ ಮಾಡುತ್ತಾರೆ. ಆ ಪಟ್ಟಿಗೆಯಿಂದ ಮತ್ತೇನು ಬರುತ್ತದೆ. ಈ ಎಲ್ಲ ದೃಶ್ಯಗಳ ಹಿನ್ನೆಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ರುದ್ರ ಶಕ್ತಿ, ಕ್ಷುದ್ರ ಶಕ್ತಿಗಳ ವಿವರಣೆ ಕೊಡ್ತಾರೆ.
ಆದರೆ, ಇವರ ಪಾತ್ರ ನೋಡಿದ್ರೆ, ಎಲ್ಲೋ ಎರಡೂ ಶಕ್ತಿಗಳು ಗಣಿ ಪಾತ್ರದಲ್ಲಿಯೇ ಇವೆ ಅನಿಸುತ್ತದೆ. ಆದರೆ, ಆ ಒಂದು ಮ್ಯಾಟರ್ ಇಲ್ಲಿ ರಿವೀಲ್ ಆಗಿಲ್ಲ. ಬದಲಾಗಿ, ಗೋಲ್ಡನ್ ಸ್ಟಾರ್ ಗಣೇಶ್ ಅದ್ಭುತ ಅಭಿನಯದ ಒಟ್ಟು ಪರಿಚಯ ಇಲ್ಲಿ ಅಗುತ್ತದೆ. ಒಟ್ಟಾರೆ, ಗಣೇಶ್ ಅಭಿನಯದ ಪಿನಾಕ ತನ್ನ ಟೈಟಲ್ ಮತ್ತು ಟೀಸರ್ ಮೂಲಕವೇ ಈಗಲೇ ಒಂದು ಹೊಸ ಕುತೂಹಲ ಮೂಡಿಸಿದೆ ಅಂತಲೇ ಹೇಳಬಹುದು.
