- ನೋಡುಗರ ಹೃದಯ ಗೆಲ್ಲುತ್ತಿದೆ “ಅವನಿರಬೇಕಿತ್ತು” ಚಿತ್ರದ “ಓಹೋ ಹೃದಯ”
- ಹೊಸಬರ ಹೊಸ ಪ್ರಯತ್ನದ “ಅವನಿರಬೇಕಿತ್ತು” ಚಿತ್ರದ ಎರಡನೇ ಹಾಡು ಬಿಡುಗಡೆ
- ವಿಭಿನ್ನ ಚಿತ್ರವನ್ನು ನೀಡುತ್ತಿದೆ ಅಶೋಕ್ ಸಾಮ್ರಾಟ್ ಸಾರಥ್ಯದ ಚಿತ್ರ ತಂಡ
ಹೊಸ ನಿರ್ದೇಶಕ, ನಾಯಕರ ಚಿತ್ರ ತಂಡ ವಿನೂತನ ಕಥೆಯೊಂದಿಗೆ ಚಂದನವನಕ್ಕೆ ಕಾಲಿಟ್ಟಿದೆ. ಅಶೋಕ್ ಸಾಮ್ರಾಟ್ Ashok Samrat ಆಕ್ಷನ್ ಕಟ್ ಹೇಳುತ್ತಿರುವ “ಅವನಿರಬೇಕಿತ್ತು” Avanirabekittu ಚಿತ್ರದ ಹಾಡು “ಅಂದಕಾಲತ್ತಿಲೇ ಇಂದ ಕಾಲತ್ತಿಲೇ” Andakalattille Indakalattille ಫೇಮಸ್ ಆಗ್ತಿದ್ದಂಗೇ ಇನ್ನೊಂದು ಹಾಡು “ಓಹೋ ಹೃದಯ” ಝಂಕಾರ್ ಮ್ಯೂಸಿಕ್ Jhankar Music ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಹೃದಯ ಗೆಲ್ತಿದೆ. ಈ ಹಾಡನ್ನು ಅರ್ಪಾಜ್ ಉಳ್ಳಾಳ್ ಮತ್ತು ಅನುರಾಧ ಭಟ್ Anuradha Bhat ಹಾಡಿದ್ದಾರೆ. ಲೋಕಿ ತಪಸ್ಯ Loki Thapasya ಅವರ ಸಂಗೀತ ಈ ಹಾಡಿಗಿದೆ.
ನೋವಿಕ ಸಿನಿ ಪ್ರೊಡಕ್ಷನ್ Novika Cine Production ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಚಿತ್ರ ನಿರ್ದೇಶಕರ ಬಾಲ್ಯದ ಗೆಳೆಯ ಮುರಳಿ ಈ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ. ಭರತ್ Bharath ಹಾಗೂ ಸೌಮ್ಯ Sowmya ನಾಯಕ. ನಾಯಕಿಯರಾಗಿ ಮಿಂಚಿದ್ದು, ಇಬ್ಬರಿಗೂ ಇದು ಚೊಚ್ಚಲ ಅವಕಾಶ. ಸಿನಿಮಾದಲ್ಲಿ ಲಕ್ಷ್ಮಿ ದೇವಮ್ಮ, ಪ್ರಶಾಂಸ್ ಸಿದ್ದಿ, ಮಂಜುನಾಥ್, ಕಿರಣ್ ಹೆಗಡೆ ನಟಿಸಿದ್ದಾರೆ. ಪೃಥ್ವಿ ಮಾಲೂರು Prithvi Maluru ಛಾಯಾಗ್ರಹಣ ಚಿತ್ರಕ್ಕಿದೆ. ಏಪ್ರಿಲ್ ತಿಂಗಳಲ್ಲಿ ತೆರೆಗೆ ತರುವ ಆಲೋಚನೆ ಚಿತ್ರ ತಂಡದ್ದು.