- ಬಹುತೇಕ ಚಿತ್ರೀಕರಣ ಮುಗಿಸಿದ “ಬ್ರ್ಯಾಟ್” ಚಿತ್ರತಂಡ
- ಕೌಸಲ್ಯಾ ಸುಪ್ರಜಾ ರಾಮ ಖ್ಯಾತಿಯ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ.
- ಬಹುತೇಕ ಮುಕ್ತಾಯಗೊಂಡಿದೆ ಡಾರ್ಲಿಂಗ್ ಕೃಷ್ಣ ಹಾಗೂ ಮನಿಷಾ ಜೋಡಿಯ ಈ ಚಿತ್ರದ ಚಿತ್ರೀಕರಣ
ಮಂಜುನಾಥ್ ಕಂದಕೂರ್ Manjunath Kandakur ನಿರ್ಮಾಣದ “ಬ್ರ್ಯಾಟ್” Brat ಚಿತ್ರದ ಶೀರ್ಷಿಕೆ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಅಪೂಪದ ವಿಷಯ ವಸ್ತುವನ್ನು ಹೊಂದಿರುವ ಈ ಚಿತ್ರಕ್ಕೆ ಶಶಾಂಕ್ Shashank ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕ ನಟನಾಗಿ ನಟಿಸಿರುವ ಡಾರ್ಲಿಂಗ್ ಕೃಷ್ಣ Darling Krishna ಅವರೂ ಈವರೆಗೆ ನಟಿಸಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ಮನಿಷಾ Manisha ಜೊತೆಗೂಡಿದ್ದಾರೆ.
ಐದು ಭಾಷೆಗಳಲ್ಲಿ ಅನಾವರಣಗೊಳ್ಳುತ್ತಿದೆ ಚಿತ್ರ
ಐದು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರ ಇದಾಗಿದ್ದು, ಚಿತ್ರದ ಕಥಾಹಂದರಕ್ಕೆ ಸೂಕ್ತವಾಗುವಂತೆ “ಬ್ರ್ಯಾಟ್” ಎಂಬ ಹೆಸರನ್ನು ಚಿತ್ರತಂಡ ಆಯ್ದುಕೊಂಡಿದೆಯಂತೆ. ಇದು ಅಪ್ಪ-ಮಗನ ಸಂಘರ್ಷದ ಕಥೆಯಾಗಿದ್ದು, ಇಲ್ಲಿ ಅಪ್ಪನಿಗೆ ಮಗನೇ ಬ್ರ್ಯಾಟ್. ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ Achuth Kumar ಮಿಂಚಿದ್ದು, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ತಾರಾಗದಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಬಿಡುಗಡೆಯ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.