- “90 ಎಮ್.ಎಲ್.” ತುಳು ಸಿನಿಮಾದ ಚಿತ್ರೀಕರಣ ಮುಗಿಸಿದ ಚಿತ್ರತಂಡ
- ರಂಜಿತ್ ಸಿ ಬಜಾಲ್ ನಿರ್ದೇಶನ ಹಾಗೂ ಡೋಲ್ಪಿ ಡಿಸೋಜಾ ನಿರ್ಮಾಣ ಚಿತ್ರಕ್ಕಿದೆ.
- ವಿನೀತ್ ಕುಮಾರ್ ನಾಯಕತ್ವದ “90 ಎಮ್.ಎಲ್.” ಚಿತ್ರ ಚಿತ್ರೀಕರಣ ಪೂರೈಸಿದೆ.
ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ, ಮನೋರಂಜನೆ ಮಿಳಿತವಾದ ಉತ್ತಮ ಕತೆಯನ್ನು ಹೊಂದಿರುವ ತುಳು ಚಿತ್ರ “90 ಎಮ್.ಎಲ್.” 90 ML ಇದೀಗ ಚಿತ್ರೀಕರಣ ಪೂರೈಸಿದ್ದು, 2025 ರಲ್ಲೇ ತೆರೆಗೆ ಬರುವ ತಯಾರಿಯಲ್ಲಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿತ್ರದ ಚಿತ್ರೀಕರಣ ನಡೆದಿದ್ದು, ಡಿ ಡಿ ಪ್ರೊಡಕ್ಷನ್ DD Production ಲಾಂಛನದಡಿಯಲ್ಲಿ ಡೋಲ್ಪಿ ಡಿಸೋಜಾ Dolpi D’souza ನಿರ್ಮಾಣ ಮಾಡಿದ್ದಾರೆ. ರಂಜಿತ್ ಸಿ ಬಜಾಲ್ Ranjith C Bajal ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಇವರೆಲ್ಲಾ ಚಿತ್ರತಂಡದಲ್ಲಿದ್ದಾರೆ
ವಿನೀತ್ ಕುಮಾರ್ Vineeth Kumar ನಾಯಕತ್ವ ಚಿತ್ರಕ್ಕಿದ್ದು, ರುಹಾನಿ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಷನ್ ಶೆಟ್ಟಿ. ದೀಪಕ್ ರೈ ಪಾಣಾಜೆ, ಉಮೇಶ್ ಮೀಜಾರ್, ಪುಷ್ಪರಾಜ್ ಬೊಳ್ಳೂರು, ನಮಿತ, ಶೈಲಾಶ್ರೀ, ಧೃತಿ ತಾರಾಗಣದಲ್ಲಿದ್ದಾರೆ. ತುಳಸೀದಾಸ್ ಮಂಜೇಶ್ವರ್ ಸಂಭಾಷಣೆ, ಅರ್ಜುನ್ ಎಂ.ವಿ. ಛಾಯಾಗ್ರಹಣ, ಸೃಜನ್ ಕುಮಾರ್ ಥೋನ್ಸೆ ಸಂಗೀತವಿದೆ.