- ಏಪ್ರಿಲ್ 25 ರಂದು ತೆರೆಯಲ್ಲಿ ಮಿಂಚಲಿದೆ “ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್” ಚಿತ್ರ
- ಚಿತ್ರವನ್ನು ನಿರ್ದೇಶಿಸಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ ಗಿರೀಶ್ ಕುಮಾರ್
- ಫ್ರಾಂಕ್ ವೀಡಿಯೋ ಮಾಡಿಕೊಂಡಿರುವ ಯೂಟ್ಯೂಬರ್ ನ ಡಿಫರಂಟ್ ಕಥೆ ಇದಾಗಿದೆ.
ವಿಭಿನ್ನ ಕಥಾಹಂದರವುಳ್ಳ “ಗ್ಯಾಂಗ್ ಸ್ಟರ್ ಅಲ್ಲ ಪ್ರಾಂಕ್ ಸ್ಟರ್” Gangster Alla Prankster ಸಿನಿಮಾ ತೆರೆಗೇರಲು ಸಿದ್ದವಾಗಿದ್ದು ಏ.25 ರಾಜ್ಯಾದ್ಯಂತ ರಿಲೀಸ್ ಆಗಲಿದೆ. ನಿರ್ದೇಶಕನಾಗಿ ಈಗಾಗಲೇ ಒಂದು ಚಿತ್ರವನ್ನು ನಿರ್ದೇಶಿಸಿರುವ ಗಿರೀಶ್ ಕುಮಾರ್ Gireesh Kumar, ಈ ಚಿತ್ರವನ್ನು ನಿರ್ದೇಶಿಸಿ ನಾಯಕ ನಟನಾಗಿ ಕೂಡ ಬಣ್ಣ ಹಚ್ಚಿದ್ದಾರೆ. ವುಡ್ ಕೀಪರ್ಸ್ Woodkeepers ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.
ಇದೊಂದು ಯೂಟ್ಯೂಬರ್ ನ ಕಥೆ
ಇದೊಂದು ಯುಟ್ಯೂರ್ ನ ಕತೆಯಾಗಿದ್ದು, ಪ್ರಾಂಕ್ ವಿಡಿಯೋ ಮಾಡಿಕೊಂಡಿರುವವನ ಬದುಕಿನ ಸಾರವನ್ನು ಹೇಳುತ್ತದಂತೆ ಈ ಚಿತ್ರ. ಹಾಗಾಗಿ ಇದು ವಿಭಿನ್ನ ಕಥಾಹಂದರ ಎಂದು ಸಿನಿ ಪ್ರಿಯರು ವಿಶ್ಲೇಷಿಸುತ್ತಾರೆ. ಸಿನಿಮಾದಲ್ಲಿ ಕಾಮಿಡಿ ಕೂಡ ಇದ್ದು, ಬದುಕಿಗೆ ಸ್ಪೂರ್ತಿಯಾಗುವ ಅಂಶಗಳೂ ಕೂಡ ಇದೆ ಎನ್ನುವ ಹಿಂಟ್ ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು.
ನಾಯಕಿಯಾಗಿ ವಿರಾನಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಉಗ್ರಂ ಖ್ಯಾತಿಯ ತಿಲಕ್ ಶೇಖರ್ ಇನ್ನೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವಕಿಶೋರ್, ಲೋಕೇಂದ್ರ, ಸೂರಜ್, ಬಲ ರಾಜವಾಡಿ, ಗಿರೀಶ್ ಬಿಜ್ಜಳ್, ಹೊನ್ನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ಮಜಾಟಾಕೀಸ್ ಪವನ್, ಹನುಮಂತೇಗೌಡ, ಭವಾನಿ ಪ್ರಕಾಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಜಾನ್ ಕೆನಡಿ ಸಂಗೀತ ಸಂಯೋಜನೆಯಿದ್ದು, ಅಜಯ್ ಕುಮಾರ್ ಛಾಯಾಗ್ರಹಣ, ರತೀಶ್ ಕುಮಾರ್ ಸಂಕಲನವಿದೆ.