- ರಿವೀಲಾಯ್ತು “ಕೊತ್ತಲವಾಡಿ” ಚಿತ್ರದ ಫಸ್ಟ್ ಲುಕ್
- ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.
- ಅಕ್ಷಯ ತೃತೀಯ ದಿನ ಚಿತ್ರತಂಡ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಮಾಡಿದೆ
ರಾಕಿಂಗ್ ಸ್ಟಾರ್ ಯಶ್ Rocking Star Yash ತಾಯಿ ಪುಷ್ಪ ಅರುಣ್ ಕುಮಾರ್ Pushpa Arun Kumar ನಿರ್ಮಾಪಕಿಯಾಗಿ ಪಿ.ಎ. ಪ್ರೊಡಕ್ಷನ್ಸ್ PA Productions ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿರಿಸಿದ್ದು, ಮೊದಲ ಪ್ರಯತ್ನದ ಫಲವಾಗಿ “ಕೊತ್ತಲವಾಡಿ” Kottalavadi ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಕ್ಷಯ ತೃತೀಯದ ಶುಭದಿನದಂದು ರಿಈಸ್ ಆಗಿದೆ. ಚಿತ್ರಕ್ಕೆ ಶ್ರೀರಾಜ್ Shriraj ಆಕ್ಷನ್ ಕಟ್ ಹೇಳಲಿದ್ದು, ಪೃಥ್ವಿ ಅಂಬರ್ Prithvi Ambar ನಾಯಕನಾಗಿ, ಕಿರುತೆರೆ ನಟಿ ಕಾವ್ಯಾ ಶೈವ Kayva Shaiva ನಾಯಕಿಯಾಗಿ ನಟಿಸಲಿದ್ದಾರೆ.
ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ
ಸಿನಿಮಾ ತಂಡದಲ್ಲಿ ಬಹುತೇಕ ಹೊಸಬರೇ ಇರಲಿದ್ದು, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸದುದ್ದೇಶ ಹೊಂದಿದೆ ಚಿತ್ರತಂಡ. ಪೋಸ್ಟರ್ ನಲ್ಲಿ ನಾಯಕ ಪೃಥ್ವಿ ಅಂಬರ್ ಮಾಸ್ ಗೆಟಪ್ ನಲ್ಲಿ ಮಿಂಚುತ್ತಿದ್ದು, ಚಿತ್ರ ಕಥೆ ಏನಿರಬಹುದೆಂಬ ಕುತೂಹಲ ಹುಟ್ಟಿಸುತ್ತಿದೆ ಪೋಸ್ಟರ್. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಅವರಂತಹ ಅನುಭವಿ ತಾರಾಬಳಗವೂ ಚಿತ್ರದಲ್ಲಿದೆ. ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಇವರಿಗೂ ಹೊಸಪ್ರಯತ್ನ. ಕಾರ್ತಿಕ್ ಎಸ್ ಕ್ಯಾಮೆರಾ ಕೈಚಳಕ, ರಾಮಿಸೆಟ್ಟಿ ಪವನ್ ಸಂಕಲನ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಡಾ.ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಹಾಗೂ ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಕೊತ್ತಲವಾಡಿ ಸಿನಿಮಾಗೆ ಇದೆ.