- ಕ್ಲಾಸ್ ಆಗಿ ಹೊರಬಂತು “ದಿ ಪ್ಯಾರಡೈಸ್” ಚಿತ್ರದ ಮೊದಲ ಝಲಕ್
- ದಸರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ನ್ಯಾಚುರಲ್ ಸ್ಟಾರ್ ನಾನಿ ನಾಯಕತ್ವದ ಸಿನಿಮಾ
- ನಿರ್ದೇಶಕ ಶ್ರೀಕಾಂತ್ ಒಡೆಲಾ ಆಕ್ಷನ್ ಕಟ್ ಹೇಳಲಿರುವ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.
“ದಿ ಪ್ಯಾರಡೈಸ್” ಅನ್ನೋ ಹೆಸರೇ ಕೇಳುಗರಿಗೆ ಅದ್ಧೂರಿಯಾಗಿ ಕೇಳಿಸ್ತಿದೆ. ಈ ಸಂದರ್ಭದಲ್ಲಿ ಸುಧಾಕರ್ ಚೆರುಕುರಿ ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ನಡಿ ಬಹಳ ಅದ್ಧೂರಿಯಾಗಿ ದಿ ಪ್ಯಾರಡೈಸ್ ಚಿತ್ರವನ್ನು ನಿರ್ಮಾಣಕ್ಕೆ ಹೊರಟಿದ್ದಾರೆ. ಇವರ ಕನಸಿಗೆ ಕೈ ಜೋಡಿಸಿದ್ದಾರೆ ನಿರ್ದೇಶಕ ಶ್ರೀಕಾಂತ್ ಒಡೇಲಾ. 26 ಮಾರ್ಚ್ 2026 ಕ್ಕೆ ಈ ಸಿನಿಮಾವನ್ನು ತೆರೆಗೆ ತರುವ ನಿರೀಕ್ಷೆಯಿಂದ ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಕ್ಕೆ ಕೈ ಹಾಕಿದೆ ಚಿತ್ರತಂಡ.
ರಗಡ್ ಆಗಿ ಹೊರಬಂದಿದೆ ಮೊದಲ ಝಲಕ್
ರಾ ಸ್ಟೇಟ್ ಮೆಂಟ್ ಎಂಬ ಟೈಟಲ್ ನಡಿ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದ್ದು, ನಾಯಕ ನ್ಯಾಚುರಲ್ ಸ್ಟಾರ್ ನಾನಿ ಕ್ಲಾಸ್ ಆಗಿ ರಕ್ತಸಿಕ್ತ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡ್ತಿದ್ರೇ ಮೂವೀ ಹಾರರ್, ಥ್ರಿಲ್ಲರ್ ಆಗಿರಬಹುದೆಂಬ ಗೆಸ್ ಮಾಡ್ಬೋದಾಗಿದ್ದು, ಸಸ್ಪೆನ್ಸ್ ಕ್ರಿಯೇಟ್ ಮಾಡ್ತಿದೆ. ಮೊದಲ ಝಲಕ್ ನ್ನು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರ ಮೂಡಿಬರಲಿದೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದ್ರರ್ ಸಂಗೀತ ನಿರ್ದೇಶನ, ಜಿ.ಕೆ.ವಿಷ್ಣು ಛಾಯಾಗ್ರಹಣ, ನವೀನ್ ನೂಲಿ ಸಂಕಲನ ದಿ ಪ್ಯಾರಡೈಸ್ ಸಿನಿಮಾಕ್ಕಿದೆ.