ಹೈಪ್ ಕ್ರಿಯೇಟ್ ಮಾಡ್ತಿದೆ “ಎಕ್ಕ” ಸಿನಿಮಾದ ಮೊದಲ ಹಾಡು

Date:

  • ಹೈಪ್ ಕ್ರಿಯೇಟ್ ಮಾಡ್ತಿದೆ “ಎಕ್ಕ” ಸಿನಿಮಾದ ಮೊದಲ ಹಾಡು
  • ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್ ನಟನೆಯ “ಎಕ್ಕ” ಚಿತ್ರದ ಮೊದಲ ಹಾಡು ಬಿಡುಗಡೆ
  • ಜೂನ್ 6 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಈ ಚಿತ್ರ

ಪಿಆರ್‌ಕೆ ಪ್ರೊಡಕ್ಷನ್ಸ್, PRK Productions ಕೆಆರ್‌ಜಿ ಸ್ಟುಡಿಯೋಸ್ KRG Studios ಮತ್ತು ಜಯಣ್ಣ ಫಿಲ್ಮ್ಸ್ Jayanna Films ಜಂಟಿಯಾಗಿ ನಿರ್ಮಿಸುತ್ತಿರುವ ಆಕ್ಷನ್-ಥ್ರಿಲ್ಲರ್ ಮೂವೀ “ಎಕ್ಕ” Ekka ಇದಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ ರೋಹಿತ್ ಪದಕಿ Rohith Padaki. ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಆನಂದ್ ಆಡಿಯೋದ Anand Audio ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಮೊದಲ ಹಾಡು “ಎಕ್ಕಾ ಮಾರ್ ಮಾರ್” Ekka Maar Maar ಬಿಡುಗಡೆ ಆಗಿದ್ದು, ಸಕ್ಕತ್ ಹೈಪ್ ಕ್ರಿಯೇಟ್ ಮಾಡ್ತಿದೆ. ಯುವ ಚಿತ್ರದ ನಟನೆಯ ನಂತರ್ ಯುವರಾಜ್ ಕುಮಾರ್ Yuvaraj Kumar ನಾಯಕತ್ವದ ಎರಡನೇ ಚಿತ್ರ ಇದಾಗಿದ್ದು, ಸಂಪದ Sampada ಹಾಗೂ ಸಂಜನಾ ಆನಂದ್ Sanjana Anad ನಾಯಕಿಯರಾಗಿ ನಟಿಸಿದ್ದಾರೆ.

ಹೀಗಿದೆ ಚಿತ್ರತಂಡ

ರೋಹಿತ್ ಪದಕಿ ಹಾಗೂ ವಿಕ್ರಂ ಹತ್ವಾರ್ Vikram Hathwar ಜೊತೆಗೂಡಿ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಈ ಹಾಡಿಗೆ ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಅವರು ಸಂಗೀತ ಸಂಯೋಜಿಸಿದ್ದಾರೆ. ರೋಹಿತ್ ಪದಕಿ, ಚರಣ್ ರಾಜ್ ಮತ್ತು ಮಹಾಲಿಂಗ್ ವಿಎಂ ಧ್ವನಿ ನೀಡಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವೂ ಇದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ. ಜೂನ್ 6 ರಂದು ಕುತೂಹಲಗಳಿಗೆ ಅಂತ್ಯ ಕಾಣಲಿದ್ದು ಚಿತ್ರ ತೆರೆ ಮೇಲೆ ಬರಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಏಪ್ರಿಲ್ 18 ಕ್ಕೆ ತೆರೆಯ ಮೇಲೆ ಮೊಳಗಲಿದೆ “ವೀರ ಚಂದ್ರಹಾಸ” ನ ಅಟ್ಟಹಾಸ

ಏಪ್ರಿಲ್ 18 ಕ್ಕೆ ತೆರೆಯ ಮೇಲೆ ಮೊಳಗಲಿದೆ “ವೀರ ಚಂದ್ರಹಾಸ" ನ...

ಸಿನಿಪ್ರಿಯರ ಮುಂದೆ ತೆರೆದುಕೊಳ್ಳಲಿದೆ “ನಿಮ್ದೇ ಕಥೆ”

ಸಿನಿಪ್ರಿಯರ ಮುಂದೆ ತೆರೆದುಕೊಳ್ಳಲಿದೆ “ನಿಮ್ದೇ ಕಥೆ” ಅಭಿಲಾಷ್ ದಳಪತಿ ಮತ್ತು ರಾಷಿಕಾ ಶೆಟ್ಟಿ...

“ಪೆನ್ ಡ್ರೈವ್” ಗೆ ಸಿಕ್ತು ಯು/ಎ ಪ್ರಮಾಣಪತ್ರ

“ಪೆನ್ ಡ್ರೈವ್” ಗೆ ಸಿಕ್ತು ಯು/ಎ ಪ್ರಮಾಣಪತ್ರ ಶೀರ್ಷಿಕೆಯಿಂದಲೇ ಕುತೂಹಲವನ್ನು ಹುಟ್ಟುಹಾಕಿದೆ ಸೆಬಾಸ್ಟಿಯನ್...

ಬಹುತೇಕ ಚಿತ್ರೀಕರಣ ಮುಗಿಸಿದ “ಬ್ರ್ಯಾಟ್” ಚಿತ್ರತಂಡ

ಬಹುತೇಕ ಚಿತ್ರೀಕರಣ ಮುಗಿಸಿದ “ಬ್ರ್ಯಾಟ್” ಚಿತ್ರತಂಡ ಕೌಸಲ್ಯಾ ಸುಪ್ರಜಾ ರಾಮ ಖ್ಯಾತಿಯ ಶಶಾಂಕ್...