- ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್
- “ಇದ್ರೆ ನೆಮ್ದಿಯಾಗ್ ಇರ್ಬೇಕ್” ಹಾಡನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ
- ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಪೋಸ್ಟ್-ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿರುವ “ದಿ ಡೆವಿಲ್”
ನಟ ದರ್ಶನ್ Darshan ಅಭಿನಯದ ಬಹುನಿರೀಕ್ಷಿತ “ದಿ ಡೆವಿಲ್” The Devil ಚಿತ್ರದ “ಇದ್ರೆ ನೆಮ್ದಿಯಾಗ್ ಇರ್ಬೇಕ್” Idre Nemdiyag Irbeku ಎನ್ನುವ ಮೊದಲ ಹಾಡನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಪ್ರಕಾಶ್ ವೀರ್ Prakash Veer ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ರಚನಾ ರೈ Rachana Rai ನಟಿಸಿದ್ದಾರ. ಈ ಚಿತ್ರದ “ಇದ್ರೆ ನೆಮ್ದಿಯಾಗ್ ಇರ್ಬೇಕ್” ಎಂಬ ಹಾಡು ಬಿಡುಗಡೆಗೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿರುವುದು ವಿಶೇಷ.
ಕಾತುರದಲ್ಲಿ ದರ್ಶನ್ ಅಭಿಮಾನಿಗಳು
ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಪೋಸ್ಟ್-ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿರುವ “ದಿ ಡೆವಿಲ್” ಚಿತ್ರತಂಡ ಡಬ್ಬಿಂಗ್ ಪ್ರಕ್ರಿಯೆಯನ್ನು ಸಹ ಮುಗಿಸಿದ್ದು ಗಣೇಶ ಚತುರ್ಥಿಯ ಹೊತ್ತಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ. ಅದರ ಮೊದಲು ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆಯಾಗಲಿರುವ “ದಿ ಡೆವಿಲ್” ಚಿತ್ರದ ಹಾಡಿಗಾಗಿ ದರ್ಶನ್ ಅಭಿಮಾನಿಗಳು ಕಾಯುವಂತಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ Sarigama Music ಲೇಬಲ್ ಪಡೆದುಕೊಂಡಿದೆ. ಒಂದು ಅಂದಾಜಿನ ಪ್ರಕಾರ ಅಕ್ಟೋಬರ್ ವೇಳೆಗೆ ಚಿತ್ರ ರಿಲೀಸಾಗುವ ಸಾಧ್ಯತೆ ಇದೆ.
“ದಿ ಡೆವಿಲ್” ಚಿತ್ರದಲ್ಲಿ ಅಚ್ಯುತ್ ಕುಮಾರ್ Achyuth Kumar, ಮಹೇಶ್ ಮಂಜ್ರೇಕರ್ Mahesh Manjrekar, ಶರ್ಮಿಳಾ ಮಾಂಡ್ರೆ Sharmila Mandre, ಚಂದು ಗೌಡ ಮತ್ತು ವಿನಯ್ ಗೌಡ ಸೇರಿದಂತೆ ಇತರರು ನಟಿಸಿದ್ದಾರೆ. ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. “ದಿ ಡೆವಿಲ್” ದರ್ಶನ್ ಅವರ ವೃತ್ತಿಜೀವನದಲ್ಲಿ ತಿರುವು ನೀಡುವ ಚಿತ್ರವೆಂದು ಹೇಳಲಾಗುತ್ತಿದ್ದು ಅವರ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುವಂತೆ ಮಾಡಿದೆ “ದಿ ಡೆವಿಲ್” ಚಿತ್ರತಂಡ.