“ಮರಳಿ ಮನಸಾಗಿದೆ” ಚಿತ್ರದ ಹಾಡಿನ ಪಯಣ ಆರಂಭ

Date:

  • “ಮರಳಿ ಮನಸಾಗಿದೆ” ಚಿತ್ರದ ಹಾಡಿನ ಪಯಣ ಆರಂಭ
  • ಸಂಗೀತ ಪ್ರಧಾನ ಚಿತ್ರದ ಮೊದಲ ಹಾಡು “ಎದುರಿಗೆ ಬಂದರೆ ಹೃದಯಕೆ ತೊಂದರೆ” ಎ2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆ
  • ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ ಚಿತ್ರ “ಮರಳಿ ಮನಸಾಗಿದೆ”.

ಬೆನಕ ಟಾಕೀಸ್ Benaka Talkies ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ಜಂಟಿಯಾಗಿ ನಿರ್ಮಿಸಿರುವ ಸಂಗೀತ ಪ್ರಧಾನ ಚಿತ್ರ “ಮರಳಿ ಮನಸಾಗಿದೆ” Marali Manasagide. ನಾಗರಾಜ್ ಶಂಕರ್ Nagaraj Shankar ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅರ್ಜುನ್ ವೇದಾಂತ್ Arjun Vedanth ನಾಯಕರಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು “ಎದುರಿಗೆ ಬಂದರೆ ಹೃದಯಕೆ ತೊಂದರೆ” ಶಾಸಕ ಆಶ್ವಥ್ ನಾರಾಯಣ Ashwath Narayana ಅವರಿಂದ ಬಿಡುಗಡೆಯಾಗಿದ್ದು ಆ ಮೂಲಕ ಸಿನಿಮಾದ ಹಾಡಿನ ಪಯಣ ಆರಂಭವಾಗಿದೆ.

ಯುವಜನತೆಗೆ ಹತ್ತಿರವಾಗುವ ಸಂಗೀತ ಪ್ರಧಾನ ಚಿತ್ರ

ವಿನು ಮನಸು Vinu Manasu ಸಂಗೀತ ನೀಡಿರುವ ಈ ಚಿತ್ರದ ಹಾಡು ಇದೀಗ ಎ2 ಮ್ಯೂಸಿಕ್ ಯೂಟ್ಯೂಬ್ A2 MUSIC ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಆಶಿತ್ ಸುಬ್ರಹ್ಮಣ್ಯ ಹಾಗೂ ಶ್ರೀನಿಧಿ ಅವರು ಬರೆದಿರುವ ಈ ಹಾಡನ್ನು ಸಂತೋಷ್ ವೆಂಕಿ ಹಾಡಿದ್ದಾರೆ. ಇದು ಸಂಬಂಧಗಳ ಮೌಲ್ಯವನ್ನು ತಿಳಿಸುವುದರೊಂದಿಗೆ ಯುವಜನತೆಗೆ ಹತ್ತಿರವಾಗುವ ಚಿತ್ರವಾಗಿದೆ. ಇದರಲ್ಲಿ ಎರಡು ಚಿತ್ರಗಳಿರಲಿದ್ದು, ಇಂಟರ್ವಲ್ ಗೂ ಮೊದಲು ಹಾಗೂ ನಂತರದ ಭಾಗಗಳಲ್ಲಿ ಬೇರೆ ಬೇರೆ ಆಂಗಲ್ ಇದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇಬ್ಬರು ನಾಯಕಿಯರು ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್ ಚಿತ್ರದಲ್ಲಿ ಮಿಂಚಿದ್ದಾರೆ. ಕಲಾವಿದರಾದ ರಘು ಸಿರುಂಡೆ, ಸಂಗೀತ ಸಂಯೋಜಕ ವಿನು ಮನಸು, ಛಾಯಾಗ್ರಾಹಕ ಹಾಲೇಶ್, ಸಂಕಲನಕಾರ ಹರೀಶ್ ಕೊಮ್ಮೆ ಹಾಗೂ ವಿಜಯ್ ಕುಮಾರ್ ಮುಂತಾದವರು ಚಿತ್ರತಂಡದಲ್ಲಿದ್ದು ಶ್ರಮಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...