- ಸೆಟ್ಟೇರಿತು “ಸೋಲ್ ಮೇಟ್ಸ್”, ಸದ್ಯದಲ್ಲೇ ಪ್ರಾರಂಭವಾಗಲಿದೆ ಚಿತ್ರೀಕರಣ
- ಮೊದಲ ಚಿತ್ರದಲ್ಲೇ ಸಿನಿ ಪ್ರೇಕ್ಷಕರ ಮನ ಗೆದ್ದ ನವೀನ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ
- ಅಭ್ಯುದಯ ಪ್ರೊಡಕ್ಷನ್ ಹೌಸ್ ನಿಂದ ಮೊದಲ ಚಿತ್ರ “ಸೋಲ್ ಮೇಟ್ಸ್”
ಅಭ್ಯುದಯ ಪ್ರೊಡಕ್ಷನ್ಸ್ ಎಂಬ ಹೊಸ ಪ್ರೊಡಕ್ಷನ್ ಹೌಸ್ ನಿರ್ಮಿಸುತ್ತಿರುವ ಚಿತ್ರ “ಸೋಲ್ ಮೇಟ್ಸ್” ಇದರ ಮುಹೂರ್ತ ನೆರವೇರಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದ ನಿರ್ಮಾಪಕರಾಗಿ ಬಂಡವಾಳ ಹೂಡಲಿದ್ದಾರೆ ನವೀನ್ ಗೌಡ. ಸಿನಿಮಾದಲ್ಲಿ ಯುವಪ್ರತಿಭೆಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರೊಂದಿಗೆ ನಾಯಕ ನಟನಾಗಿ ಬಣ್ಣ ಹಚ್ಚಲಿದ್ದಾರೆ 4N6 ಖ್ಯಾತಿಯ ನವೀನ್ ಕುಮಾರ್. ತನ್ನ ನಾಯಕತ್ವದ ಮೊದಲ ಚಿತ್ರ 4N6 ನಲ್ಲೇ ತನ್ನ ಚಾಣಾಕ್ಷ ಪ್ರತಿಭೆಯಿಂದ ಜನರ ಮನ ಗೆದ್ದ ಈ ಯುವನಾಯಕ ಮುಂದಿನ ಚಿತ್ರದಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಇವರಿಗೆ ನಾಯಕಿಯಾಗಿ ಸಾಥ್ ನೀಡಲಿದ್ದಾರೆ ನಿರ್ಮಲಾ.

ಚಿತ್ರಕ್ಕೆ ಶ್ರಮಿಸಲಿದ್ದಾರೆ ಘಟಾನುಘಟಿಗಳು
ಬಾಲರಾಜ್ ವಾಡಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕರ್ಣ, ಶಿಲ್ಪಶ್ರೀ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್ಯ ಎಸ್ ರೆಡ್ಡಿ ಸಿನಿಮಾಟೋಗ್ರಫಿ ಇರಲಿದ್ದು, ಚಿತ್ರ ಬೆಂಗಳೂರು ಮುಂತಾದ ಸ್ಥಳದಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಆದಷ್ಟು ಶೀಘ್ರದಲ್ಲಿ ಸಿನಿಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ “ಸೋಲ್ ಮೇಟ್ಸ್”.


