- ಮೆಚ್ಚುಗೆ ಪಡೀತಿದೆ “ದೂರ ತೀರ ಯಾನ”ದ ಪ್ರೇಮಗೀತೆ
- ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಮೂಡಿಬಂದಿದೆ “ಇದೇನಿದು ಸೂಚನೆ…” ಹಾಡು.
- ಮಂಸೋರೆ ನಿರ್ದೇಶನದ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್
ಡಿ ಕ್ರಿಯೇಶನ್ಸ್ D creations ನಿರ್ಮಾಣ ಸಂಸ್ಥೆಯ ಮೂಲಕ ಆರ್. ದೇವರಾಜ್ R Devaraj ನಿರ್ಮಾಣ ಮಾಡ್ತಿರೋ “ದೂರ ತೀರ ಯಾನ” Doora Theera Yana ಸಿನಿಮಾ ಮೊದಲ ಲವ್ ಸಾಂಗ್ “ಇದೇನಿದು ಸೂಚನೆ…” Idenidu Soochane ರಿಲೀಸ್ ಆಗಿದ್ದು, ಎಂಆರ್ಟಿ ಮ್ಯೂಸಿಕ್ MRT Music ಯೂಟ್ಯೂಬ್ ನಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ಇದೊಂದು ಮೆಲೋಡಿ ಸಾಂಗ್ ಆಗಿದ್ದು ಜನರ ಮನ ಗೆಲ್ಲುತ್ತಿದೆ. ಮೆಲೋಡಿಪ್ರಿಯರು ಈ ಹಾಡು ಕೇಳಿ ಮೆಚ್ಚಿಕೊಂಡಿದ್ದಾರೆ. ಬಕ್ಕೇಶ್ ಮತ್ತು ಕಾರ್ತಿಕ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದು ಈ ಹಾಡಿಗೆ ಗೀತರಚನೆಕಾರ ಕವಿರಾಜ್ Kaviraj ಅವರ ಸಾಹಿತ್ಯ ಹಾಗೂ ಪ್ರಸಿದ್ಧ ಗಾಯಕ ಅರ್ಮಾನ್ ಮಲಿಕ್ Armaan Malik ಅವರ ಕಂಠವಿದೆ.
ಬಿಡುಗಡೆಗೆ ಸಜ್ಜಾಗ್ತಿದೆ ಸಿನಿಮಾ
ಮಂಸೋರೆ Mansore ಅವರು ‘ದೂರ ತೀರ ಯಾನ’ ಸಿನಿಮಾಗೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರೆ, ಚೇತನಾ ತೀರ್ಥಹಳ್ಳಿ Chethana Thirthalli ಸಂಭಾಷಣೆ ಬರೆದಿದ್ದಾರೆ. ಮುಖ್ಯಪಾತ್ರದಲ್ಲಿ ವಿಜಯ್ ಕೃಷ್ಣ Vijay Krishna, ಪ್ರಿಯಾಂಕಾ ಕುಮಾರ್ Priyanka Kumar ಕಾಣಿಸಿಕೊಂಡಿದ್ದಾರೆ. ಹರೆಯದ ಪ್ರೇಮಿಗಳು ಬೆಂಗಳೂರಿನಿಂದ ಪಯಣ ಆರಂಭಿಸಿ ಗೋವಾ ತಲುಪುವ ಸಂದರ್ಭದಲ್ಲಿ ಪರಸ್ಪರರು ಅರ್ಥ ಮಾಡಿಕೊಳ್ಳುವ ಜರ್ನಿ ಸಿನಿಮಾ ಇದಾಗಿದ್ದು, ಬೆಂಗಳೂರು, ಕುಂದಾಪುರ, ಉಡುಪಿ, ಗೋಕರ್ಣ, ಕಾರವಾರ, ಮುರುಡೇಶ್ವರ, ಯಲ್ಲಾಪುರ, ಗೋವಾ, ದಾಂಡೇಲಿ ಮುಂತಾದ ಕಡೆಗಳಲ್ಲಿ ಒಟ್ಟು 40 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜುಲೈ 11ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದಾರೆ ನಿರ್ಮಾಪಕರು.